
ಚೇತನಾ ವಿಶೇಷ ಶಾಲೆಯಲ್ಲಿ ವಾಕ್ ಮತ್ತು ಶ್ರವಣತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಸೇವಾಕ್ಷೇತ್ರದ ಮುಂದುವರಿದ ಅಂಗವಾಗಿ ಚೇತನಾ ವಿಶೇಷಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ವಾಕ್ ಮತ್ತು ಶ್ರವಣ ಚಿಕಿತ್ಸಾ ಘಟಕದಲ್ಲಿ ವಾಕ್ ಮತ್ತು ಶ್ರವಣ ವಿಭಾಗ ಯೆನಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್ ದೇರಳಕಟ್ಟೆ, ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 30.09.2026ನೇ ಬುಧವಾರ ಉಚಿತ ವಾಕ್ – ಶ್ರವಣದೋಷ ತಪಾಸಣಾ ಹಾಗೂ ಚಿಕಿತ್ಸಾ
ಶಿಬಿರವನ್ನು ಹಮ್ಮಿಕೊಂಡಿದ್ದು ಶಿಬಿರವನ್ನು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್. ಎಲ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶಾರೀರಿಕವಾಗಿ ನ್ಯೂನ್ಯತೆಯ ತಪಾಸಣೆ
ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ಆಗಾಗ ಚೇತನ ವಿಶೇಷ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಮೆಚ್ಚುಗೆ ಹಾಗೂ ಶುಭ ಹಾರೈಸಿದರು.
ಯೆನಪೋಯ ವಾಕ್ ಮತ್ತು ಶ್ರವಣ ವಿಭಾಗದ ಅಸಿಸ್ಟೆಂಟ್
ಪ್ರೋಫೆಸರ್ ಸ್ವಾತಿ ಚಿನ್ನಸ್ವಾಮಿ, ಅಸೋಸಿಯೇಟ್ ಪ್ರೋಫೆಸರ್ ಮೆರಿನ್ ಮ್ಯಾಥ್ಯೂ ಹಾಗೂ ಕ್ಲಿನಿಕಲ್ ಸುಪರ್ವೈಸರ್ ಅನನ್ಯ ರಮೇಶ್ ಅವರ ತಂಡ ವಾಕ್ ಮತ್ತು ಶ್ರವಣ ತಪಾಸಣೆ ಹಾಗೂ ಚಿಕಿತ್ಸೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾರತೀ ಸೇವಾ ಮಂಡಳಿ ಟ್ರಸ್ಟ್ನ ಕಾರ್ಯದರ್ಶಿ
ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್, ವಿದ್ಯಾರ್ಥಿಗಳ ಹೆತ್ತವರು
ಉಪಸ್ಥಿತರಿದ್ದರು. ಕಾರ್ಯದರ್ಶಿ ರಘುನಾಥ್ ಶೆಟ್ಟಿ ಸ್ವಾಗತಿಸಿದರು, ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮಾ| ಕಿರಣ್ ಅವರ.ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವು ಕೋಶಾಧಿಕಾರಿ ವಿಜಯ್ ಕುಮಾರ್ ಇವರ ಧನ್ಯವಾದದೊಂದಿಗೆ ಮುಕ್ತಾಯವಾಯಿತು.






















