
ಕಾರ್ಕಳದ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳು 2026–27ನೇ ಸಾಲಿನ ರಾಷ್ಟ್ರೀಯ ಮಟ್ಟದ ಶಾಲಾ ಮಕ್ಕಳ ಚಿತ್ರಕಲೆ ಮತ್ತು ಸುಂದರ ಹಸ್ತಾಕ್ಷರ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಪುಣೆಯ ಕಲಾಭಾರತಿ ಚೈಲ್ಡ್ ಆರ್ಟ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ವತಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಮೌಲ್ಯ ಎಸ್. ಪೂಜಾರಿ, ಅಂಶುಲ್, ಅಭಿಜ್ಞಾ ಎಚ್. ಆಚಾರ್ಯ, ಆರವಿ ಆರ್, ತೇಜಸ್ ವಿ. ಶೇರಿಗಾರ್, ಬೋಲಾ ಆರಾಧ್ಯ ಹೆಗ್ಡೆ, ವಿವಾನ್ ಹೆಗ್ಡೆ ಹಾಗೂ ದೈವಿಕ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಯಶಸ್ಸಿಗೆ ಶುಭ ಹಾರೈಸಿದ್ದಾರೆ.






















