29.8 C
Udupi
Monday, October 5, 2026
spot_img
spot_img
HomeBlog33ನೇ ವಸಂತಕ್ಕೆ ಕಾಲಿಟ್ಟ ರಚಿತಾ ರಾಮ್ : ಅಭಿಮಾನಿಗಳ ಪ್ರೀತಿಗೆ ಭಾವುಕ ಪೋಸ್ಟ್ ಹಂಚಿಕೊಂಡ ನಟಿ

33ನೇ ವಸಂತಕ್ಕೆ ಕಾಲಿಟ್ಟ ರಚಿತಾ ರಾಮ್ : ಅಭಿಮಾನಿಗಳ ಪ್ರೀತಿಗೆ ಭಾವುಕ ಪೋಸ್ಟ್ ಹಂಚಿಕೊಂಡ ನಟಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ 33ನೇ ವಸಂತಕ್ಕೆ ಕಾಲಿಟ್ಟಿದ್ದು, ಇತ್ತೀಚೆಗೆ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ನಟಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೂಡ ವಿಶೇಷವಾಗಿ ಸಂಭ್ರಮಿಸಿದ್ದಾರೆ. ರಚಿತಾ ರಾಮ್ ಅವರ ಕಟೌಟ್‌ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ನಟಿಯ ಕೆನ್ನೆ ಹಿಂಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹುಟ್ಟುಹಬ್ಬದಂದು ರಚಿತಾ ರಾಮ್ ಅವರ ನಿವಾಸದ ಬಳಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲರೊಂದಿಗೆ ಸೆಲ್ಫಿಗೆ ಪೋಸ್ ನೀಡಿದ ನಟಿ, ಶುಭಕೋರಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡ ನಟಿ ‘ನನ್ನ ಹುಟ್ಟುಹಬ್ಬಕ್ಕೆ ಬಂದು, ನಿಮ್ಮ ಮನೆಯ ಮಗಳೆಂದು ಭಾವಿಸಿ ಇಷ್ಟು ಪ್ರೀತಿಯಿಂದ ಮತ್ತು ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ ಪ್ರತಿಯೊಬ್ಬ ಅಭಿಮಾನಿಗೂ ತುಂಬಾ ಧನ್ಯವಾದಗಳು. ನಿಮ್ಮನ್ನೆಲ್ಲಾ ಭೇಟಿಯಾಗಿ, ನಿಮ್ಮ ಪ್ರೀತಿಯನ್ನು ನೋಡಿದ್ದು ನನಗೆ ತುಂಬಾ ಖುಷಿಯಾಯಿತು. ನನ್ನ ಅಭಿಮಾನಿಗಳು, ನನ್ನ ಕುಟುಂಬದವರು, ಸ್ನೇಹಿತರು ಮತ್ತು ಮಾಧ್ಯಮದವರು, ನನ್ನ ಹುಟ್ಟುಹಬ್ಬವನ್ನು ಇಷ್ಟು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ತುಂಬಾ ಧನ್ಯವಾದಗಳು. ನನ್ನ ಮೇಲೆ ನೀವು ಇಟ್ಟಿರುವ ಈ ಪ್ರೀತಿ ಮತ್ತು ಅಭಿಮಾನಕ್ಕೆ ಜೀವನಪೂರ್ತಿ ನಾನು ಚಿರಋಣಿ. ನನ್ನ ಮತ್ತು ಅಭಿಮಾನಿಗಳ ಮಧ್ಯೆ ಇರೋ ಈ ಪ್ರೀತಿ ಹೀಗೆ ಇರಲಿ, ಯಾರ ದೃಷ್ಟಿಯೂ ಬೀಳದಿರಲಿ’ ಎಂದು ಬರೆದುಕೊಂಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page