25.3 C
Udupi
Sunday, October 4, 2026
spot_img
spot_img
HomeBlogಮೈಸೂರಿನಲ್ಲಿ ದಸರಾ ಕಂಬಳ ಆಯೋಜನೆಗೆ ವಿರೋಧ: ಸಂಪ್ರದಾಯ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಿದ ದೈವಾರಾಧಕ ತಮ್ಮಣ್ಣ...

ಮೈಸೂರಿನಲ್ಲಿ ದಸರಾ ಕಂಬಳ ಆಯೋಜನೆಗೆ ವಿರೋಧ: ಸಂಪ್ರದಾಯ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಿದ ದೈವಾರಾಧಕ ತಮ್ಮಣ್ಣ ಶೆಟ್ಟಿ

ಮಂಗಳೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲು ಉದ್ದೇಶಿಸಿರುವ ‘ದಸರಾ ಕಂಬಳ’ಕ್ಕೆ ಕರಾವಳಿಯ ಪ್ರಸಿದ್ಧ ದೈವಾರಾಧಕ ತಮ್ಮಣ್ಣ ಶೆಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಕಂಬಳ ಆಯೋಜಿಸುವುದು ತುಳುನಾಡಿನ ದೈವಾರಾಧನೆ ಹಾಗೂ ಧಾರ್ಮಿಕ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕಂಬಳಕ್ಕೂ ದೈವಾರಾಧನೆಗೂ ಅವಿನಾಭಾವ ನಂಟು

ಕರಾವಳಿಯ ಕಂಬಳ ಕ್ರೀಡೆ ದೈವಾರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಂಬಳದ ಗದ್ದೆಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ತುಳುನಾಡಿನಲ್ಲಿ ನವರಾತ್ರಿಯನ್ನು ‘ಮಾರ್ನೆಮಿ’ ಎಂದು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ದೈವಗಳಿಗೆ ವಿಶೇಷ ಪೂಜೆ ಹಾಗೂ ತಂಬಿಲ ಸೇವೆಗಳು ನಡೆಯುತ್ತವೆ. ಹೀಗಾಗಿ ಈ ಅವಧಿಯಲ್ಲಿ ಕಂಬಳದ ಕೋಣಗಳನ್ನು ಬೇರೆ ಊರಿಗೆ ಕೊಂಡೊಯ್ಯುವುದು ಸಂಪ್ರದಾಯಕ್ಕೆ ವಿರುದ್ಧ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.

ತುಳುನಾಡಿನ ಧಾರ್ಮಿಕ ಕಟ್ಟುಪಾಡುಗಳ ಪ್ರಕಾರ ನವರಾತ್ರಿ ಸೇರಿದಂತೆ ಕೆಲವು ವಿಶೇಷ ದಿನಗಳಲ್ಲಿ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಈ ಸಮಯದಲ್ಲಿ ಕೋಣಗಳ ಯಜಮಾನರು ತಮ್ಮ ಕುಟುಂಬ ಹಾಗೂ ಗ್ರಾಮ ದೈವಗಳ ಆಚರಣೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಅಲ್ಲದೆ, ಗದ್ದೆಗಳಲ್ಲಿ ಭತ್ತದ ಬೆಳೆ ಇರುವುದರಿಂದ ನವರಾತ್ರಿ ಸಂದರ್ಭದಲ್ಲಿ ಕಂಬಳ ನಡೆಸುವ ಪದ್ಧತಿ ಕರಾವಳಿಯಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಕೇವಲ ಲಾಭ ಅಥವಾ ಪ್ರಚಾರದ ಉದ್ದೇಶಕ್ಕಾಗಿ ತುಳುನಾಡಿನ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಕಡೆಗಣಿಸಬಾರದು. ಸಂಪ್ರದಾಯ ಮೀರಿ ಮೈಸೂರಿನಲ್ಲಿ ದಸರಾ ಕಂಬಳ ಆಯೋಜಿಸಿದರೆ ದೈವಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, ಮೂಲ ಆಚರಣೆ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page