
ಕಾರ್ಕಳ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾದ ದಸರಾ ಕ್ರೀಡಾಕೂಟ – CM ಕಪ್ 2026ರ ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯು ಕೊಡಗು ಜಿಲ್ಲೆಯ ಕೂಡಿಗೆಯ ಕ್ರೀಡಾ ಪ್ರೌಢಶಾಲೆಯಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ವರ್ಧಮಾನ್ ವಿದ್ಯಾ ಸಂಸ್ಥೆ, ಕಾರ್ಕಳದ ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಲಾತ್ಮಕ ಜೋಡಿ ವಿಭಾಗ :
ತೃತೀಯ ಬಹುಮಾನ
ಗಾನ್ವಿ ಜಿ.( 7ನೇ ತರಗತಿ) ಹಾಗೂ ಅನ್ವಿ ಕೋಟ್ಯಾನ್ ( 6ನೇ ತರಗತಿ) .
ಲಯಬದ್ಧ ಜೋಡಿ ವಿಭಾಗ:
ತೃತೀಯ ಬಹುಮಾನ
ಮೊಹಮ್ಮದ್ ರುಯೈಫ್( 7ನೇ ತರಗತಿ) ಹಾಗೂ ಶಿರೀಷ್ ಆರ್. ಸನಿಲ್ ( 6ನೇ ತರಗತಿ)
ಬಹುಮಾನ ವಿಜೇತರನ್ನು ಹಾಗೂ ಯೋಗ ಶಿಕ್ಷಕಿ ಮಮತಾ ಗಣೇಶ್ ರವರನ್ನು ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಅಭಿನಂದಿಸಿ ಶುಭ ಕೋರಿರುತ್ತಾರೆ.





















