32.7 C
Udupi
Friday, October 2, 2026
spot_img
spot_img
HomeBlogನ್ಯಾಯವಾದಿ ದಿ. ಎಂ.ಕೆ ವಿಜಯಕುಮಾರ್ ರವರ ಪ್ರಥಮ ವರ್ಷದ ಸ್ಮರಣಾರ್ಥ ಪ್ರಯಾಣಿಕರ ಬಸ್ಸು ತಂಗುದಾಣಗಳ ಸ್ವಚ್ಛತೆ

ನ್ಯಾಯವಾದಿ ದಿ. ಎಂ.ಕೆ ವಿಜಯಕುಮಾರ್ ರವರ ಪ್ರಥಮ ವರ್ಷದ ಸ್ಮರಣಾರ್ಥ ಪ್ರಯಾಣಿಕರ ಬಸ್ಸು ತಂಗುದಾಣಗಳ ಸ್ವಚ್ಛತೆ

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಕಾರ್ಕಳ, ಸಾರ್ವಜನಿಕ ಹಿಂದೂ ರುದ್ರಭೂಮಿ ವ್ಯವಸ್ಥಾಪನಾ ಸಮಿತಿ ಕರಿಯಕಲ್ಲು ಕಾರ್ಕಳ, ಪಲ್ಲವಿ ಡೆಕೋರೇಟರ್ಸ್ ಕಾಳಿಕಾಂಬ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ದಿ.ಎಂ.ಕೆ.ವಿಜಯ್ ಕುಮಾರ್ ಅವರ ಪ್ರಥಮ ವರ್ಷದ ಸ್ಮರಣಾರ್ಥ ಕಾರ್ಕಳ ನಗರದ ಬಸ್ಸು ಪ್ರಯಾಣಿಕರ
ತಂಗುದಾಣಗಳನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮ ಜರಗಿತು.


ಉದ್ಯಮಿ ಟಿ.ರಾಮಚಂದ್ರ ನಾಯಕ್ ಚಾಲನೆ ನೀಡಿ, ದಿ.ಎಂ.ಕೆ.ವಿಜಯ್ ಕುಮಾರ್ ರವರು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಕ್ರೀಡಾ, ನ್ಯಾಯಾಂಗ ಕ್ಷೇತ್ರದಲ್ಲಿಯೂ, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ವ್ಯಕ್ತಿಯಾಗಿದ್ದರು. ಅವರನ್ನು ಕ್ಷೇತ್ರದ ಜನತೆ ಸ್ಮರಿಸಬೇಕು ಎಂದರು.
ಆನೆಕೆರೆ, ಕುಂಟಲ್ಪಾಡಿ, ಪುಲ್ಕೇರಿ ಬೈಪಾಸ್, ಜೋಡುಕಟ್ಟೆ, ದಾನಶಾಲೆ, ಅನಂತಶಯನ, ಎಸ್.ವಿ.ಟಿ ವೃತ್ತ, ಬಂಡಿಮಠ, ಸರ್ವಜ್ಞ ವೃತ್ತ, ಕಾಬೆಟ್ಟು ಮುಂತಾದ ಕಡೆಗಳಲ್ಲಿ ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು.
ಉದ್ಯಮಿ ಚಂದ್ರಶೇಖರ ಹೆಗ್ಡೆ, ನ್ಯಾಯವಾದಿ ರವೀಂದ್ರ ಮೊಯ್ಲಿ, ಪುರಸಭೆಯ ಆರೋಗ್ಯ ಅಧಿಕಾರಿ ಲೈಲಾ ಥೋಮಸ್, ಉದ್ಯಮಿ ಸುರೇಶ್ ಕೋಟ್ಯಾನ್, ಹಿಂದೂ ರುದ್ರಭೂಮಿ ವ್ಯವಸ್ಥಾಪನ ಸಮಿತಿಯ ಸಂಚಾಲಕ ಪ್ರಕಾಶ್ ರಾವ್, ಮರಾಠ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್, ರವೀಂದ್ರ ರಾವ್, ಹರಿಶ್ಚಂದ್ರ ರಾವ್, ಸತೀಶ್ ರಾವ್, ರಮೇಶ್ ಪೂಜಾರಿ, ಧೀರಜ್ ರಾವ್, ಕಾರ್ತಿಕ್ ರಾವ್, ಪದ್ಮಾಕರ ದೇವಾಡಿಗ, ವಿನೀತ್, ಆದಿತ್ಯ ರಾವ್, ವಿಘ್ನೇಶ್ ರಾವ್ ಓಂಕಾರ್, ನಿಖಿಲ್ ರಾವ್, ವಿಘ್ನೇಶ್ ರಾವ್, ವಿಜೇತ್ ರಾವ್, ನೀಲ್, ಕಿಯಾನ್, ಪ್ರಣೀತ್, ಪುರಸಭೆಯ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page