ರಾಮಸಮುದ್ರ ಬಳಿ ಇರುವ ಮಂಗಲಪಾದೆ ತೋಟಗಾರಿಕಾ ಇಲಾಖೆ

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ, ಶ್ರೀ ಲಕ್ಷ್ಮೀ ಗೆಳೆಯರ ಬಳಗ, ಸಂಘ, ಕಾವೇರಡ್ಕ ಇವರ ಸಹಯೋಗದೊಂದಿಗೆ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಕಾರ್ಕಳ ಇವರ ಸಹಕಾರದೊಂದಿಗೆ ಗೋಗ್ರಾಸ ಸೇವಾ ಅಭಿಯಾನದ 4ನೇ ಹಂತವು ಸೆಪ್ಟೆಂಬರ್ 27ರಂದು ಭಾನುವಾರ ಬೆಳಿಗ್ಗೆ 6:30ರಿಂದ 8:30ರವರೆಗೆ ಕಾರ್ಕಳದ ರಾಮಸಮುದ್ರದ ಬಳಿಯಿರುವ ಮಂಗಲಪಾದೆ ತೋಟಗಾರಿಕಾ ಇಲಾಖೆಯ ಜಾಗದಲ್ಲಿ ನಡೆಯಿತು.

ಈ ಸೇವಾ ಕಾರ್ಯದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಸದಸ್ಯರು ಹಾಗೂ ಸೇವಾ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿ, ಹುಲ್ಲನ್ನು ಕಟಾವು ಮಾಡಿ ಸಂಗ್ರಹಿಸಿದರು.
ಸಂಗ್ರಹಿಸಿದ ಹುಲ್ಲನ್ನು ಬಜಗೋಳಿ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ನಲ್ಲಿರುವ ಗೋವುಗಳಿಗೆ, ಕಾರ್ಕಳ ಅಗ್ರಹಾರ ಗೋಶಾಲೆಗೆ ಹಾಗೂ ಕಾವೇರಡ್ಕದಲ್ಲಿರುವ ಅನಾಥ ಗೋವುಗಳಿಗೆ ಎರಡು ವಾಹನಗಳಲ್ಲಿ ಸಾಗಿಸಿ ಸಮರ್ಪಿಸಲಾಯಿತು.
ಗೋವಿಗಾಗಿ ಮೇವು – ಗೋಗ್ರಾಸ ಸೇವಾ ಅಭಿಯಾನದ ಮೂಲಕ ಇದುವರೆಗೆ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

































































































































