
ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ರಾಷ್ಟ್ರೀಯ ಸೇವ ಯೋಜನೆ ಘಟಕದ ಆಶ್ರಯದಲ್ಲಿ ಸೆಪ್ಟೆಂಬರ್ 24 ರಂದು “ಎನ್ ಎಸ್ ಎಸ್ ದಿನಾಚರಣೆ” ಹಾಗೂ” 2026-27ನೇ ಸಾಲಿನ ವಾರ್ಷಿಕ ಸಂಚಿಕೆ”ಯನ್ನು ಬಿಡುಗಡೆ ಮಾಡಲಾಯಿತು.
ಉಡುಪಿ ಪೊಲೀಸ್ ಅಧೀಕ್ಷಕರ ಕಚೇರಿಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ಕಾರ್ಕಳ ಇವರಿಂದ
” ನಶಾ ಮುಕ್ತ ಭಾರತ ಹಾಗೂ ಮೊಬೈಲ್ ದುಷ್ಪರಿಣಾಮಗಳ” ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ಹಾಗೂ ಮೊಬೈಲ್ ನ ವಿಪರೀತ ಬಳಕೆಯಿಂದ ಆಗುವ ಸಮಸ್ಯೆಗಳ ಬಗ್ಗೆ ನೈಜ ಉದಾಹರಣೆಗಳನ್ನು ನೀಡುವ ಮೂಲಕ ಅವುಗಳಿಂದ ಆಗುವ ಗಂಭೀರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿದ ರಜತ್ ರಾಮ್ ಮೋಹನ್ ಇವರು ಸಾರ್ವಜನಿಕರು ಸಹಕಾರದೊಂದಿಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘನೇ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಅನಿಲ್.ಎಸ್. ಪೂಜಾರಿ ಇವರು ವಿದ್ಯಾರ್ಥಿಗಳು ಉತ್ತಮ ಗುಣ ನಡತೆಯೊಂದಿಗೆ ಸಮಾಜದ ಆಸ್ತಿ ಆಗಬೇಕೆಂದು ಮನವಿ ಮಾಡಿದರು
ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ
ಕೆ.ಪಿ ಲಕ್ಷ್ಮೀನಾರಾಯಣ, ಪ್ರಶಾಂತ ಕರ್ಮಾರ್ ಕಟ್ಟೆ, ಪ್ರಶಾಂತ್ ಜೈನ್, ಸಂದೀಪ್ ಶೆಟ್ಟಿ, ಉಪನ್ಯಾಸಕರಾದ ವೀರೇಂದ್ರ ವಿ.ಪಿ, ಶ್ರೀಮತಿ ವನಿತಾ, ಶ್ರೀಮತಿ ಪ್ರಿಯಾಕಾರಣಿ.ಕೆ, ಶ್ರೀಮತಿ ಸೌಮ್ಯಾಕುಮಾರಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಅಂಬರೀಶ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಸ್ವಾಗತಿಸಿ,ವಂದಿಸಿದರು.
































































































































