27.4 C
Udupi
Saturday, September 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 652

ಭರತೇಶ್ ಶೆಟ್ಟಿ ,ಎಕ್ಕಾರು

ಅರ್ಜುನನಿಗೆ ಕಥೆ ಹೇಳುತ್ತಿದ್ದ ಗಂಧರ್ವ ಅಂಗಾರ ಪರ್ಣ ಕ್ಷತ್ರಿಯರಿಗೆ ಯಾಕೆ ಸಮರ್ಥನಾದ ಪುರೋಹಿತ ಬೇಕು? ಎಂಬ ಪ್ರಶ್ನೆಗುತ್ತರಿಸುತ್ತಾ, ರಾಜಾ ಸಂವರಣ ಮತ್ತು ಸೌದಾಸನ ಜೀವನ ಚರಿತ್ರೆಯನ್ನು ಹೇಳಿಯಾಗಿದೆ. ಈಗ ಪಾಂಡವರ ಕುಲಗುರುಗಳಾದ ಧೌಮ್ಯರು ಅಶ್ವಮೇಧ ಮಹಾಯಾಗದಲ್ಲಿ ಉಪಸ್ಥಿತರಿದ್ದಾರೆ. ಅವರು ಹೇಗೆ ಪಾಂಡವರ ಗುರುಗಳಾದರು ಎಂಬ ವಿಚಾರ ಸ್ಮರಿಸುತ್ತಾ ಆ ಪ್ರಕರಣ ವಿಸ್ತೃತವಾಗುತ್ತಿದೆ. ಹೀಗೆ ಅರ್ಜುನನಿಗೆ ಕುಲಗುರುಗಳ ಅಗತ್ಯತೆಯ ಬಗ್ಗೆ ವಸಿಷ್ಠರ ಉದಾಹರಣೆ ನೀಡಿದ ಗಂಧರ್ವ ಅಂಗಾರಪರ್ಣನಲ್ಲಿ ಅರ್ಜುನನು ವಸಿಷ್ಠರ ಬಗ್ಗೆ ಕೇಳಿದಾಗ ಅವನ ಕಾತರ ನಿವಾರಿಸಲು ಗುರು ವಸಿಷ್ಠರ ಸಾಮರ್ಥ್ಯವನ್ನು ವಿವರಿಸುತ್ತಾ ಇನ್ನೊಂದು ಕಥೆ ಹೇಳಲು ಆರಂಭಿಸಿ ಮಹಾರಾಜ ಸತ್ಯವ್ರತನ ಕಥೆ ಹೇಳಲಾರಂಭಿಸಿದನು. ಅರ್ಜುನ ಉತ್ಸಾಹದಿಂದ ಕಥಾಶ್ರವಣ ಮಾಡುತೊಡಗಿದನು.

ಹಿಂದೆ ತ್ರೇತಾಯುಗದಲ್ಲಿ ಸೂರ್ಯವಂಶದ ಇಕ್ಷ್ವಾಕು ರಾಜಸಂತತಿಯಲ್ಲಿ ಸತ್ಯವ್ರತ ಎಂಬ ಓರ್ವ ಮಹಾರಾಜನಿದ್ದನು. ಈತನ ಮಗ ಸತ್ಯಸಂಧರಲ್ಲಿ ಅಗ್ರೇಸರನೆಂದು ಪ್ರಖ್ಯಾತಿಗೊಂಡ ಹರಿಶ್ಚಂದ್ರ. ಈ ಸತ್ಯವ್ರತನ ಯೌವನದಲ್ಲಿ ಒಮ್ಮೆ ಮಾಡಬಾರದ ಕೆಲಸ ಸತ್ಯವ್ರತನಿಂದ ಆಗಿ ಹೋಯಿತು. ಆತ ಮದುವೆಯಾದ ಪರಸ್ತ್ರೀಯೊಬ್ಬಳನ್ನು ಅಪಹರಿಸಿದನು. ಪರಸ್ತ್ರೀ ಮಾತೃ ಸಮಾನಳು ಎಂದು ಆರಾಧಿಸಿ ಆದರಿಸಬೇಕಾದ ಅರಸನ ಮಗನು ಅಪರಾಧ ಮಾಡಿದಾಗ ಕೇಳಬೇಕಾದವನು ರಾಜನಲ್ಲವೆ? ಈ ದೂರು ಆತನ ಅಪ್ಪ ಅಂದರೆ ಆಗಿನ ಮಹಾರಾಜನ ಕಿವಿಗೆ ಬಿತ್ತು. ವಿಚಾರವನ್ನು ವಿಮರ್ಷಿಸಿ ಕೋಪಗೊಂಡ ರಾಜ, ನೀಚ ಕೆಲಸ ಮಾಡಿದವ ತನ್ನ ಮಗನಾದರೂ ತಾರತಮ್ಯ ಮಾಡಿದರೆ ಅಪಚಾರವಾಗುತ್ತದೆ. ಆಳಿಗೊಂದು ನ್ಯಾಯ, ಅರಸನಿಗೊಂದು ನ್ಯಾಯ ಎಂಬ ಭೇದಕ್ಕೆ ಗುರಿಯಾಗುವುದಿಲ್ಲವೇ? ಹಾಗಾಗಿ ತರ್ಕಿಸಿ ನ್ಯಾಯಮಾರ್ಗದಲ್ಲಿ ನಡೆದು ಅಪರಾಧಿಯಾದ ಮಗನಿಗೆ ಶಿಕ್ಷೆಯಾಗಿ ಶ್ವಪಾಕರೊಂದಿಗೆ (ನಾಯಿಮಾಂಸ ಬೇಯಿಸುವವರ ಹತ್ತಿರ) ವಾಸಮಾಡು ಎಂದು ಶಾಪವಿತ್ತನು. ಅದರಂತೆ ಸತ್ಯವ್ರತ ಶ್ವಪಾಕರೊಂದಿಗೆ ವಾಸ ಮಾಡುವಂತಾಯಿತು. ಸತ್ಯವ್ರತನಿಂದಾದ ಅಧರ್ಮ ಕಾರ್ಯದ ಫಲಶ್ರುತಿಯಾಗಿ ಕುಪಿತನಾದ ಇಂದ್ರ ಹನ್ನೆರಡು ವರ್ಷ ಮಳೆ ಸುರಿಸಲಿಲ್ಲ. ದೇಶದಲ್ಲೆಲ್ಲ ಕ್ಷಾಮ ಆವರಿಸಿತು. ಎಲ್ಲೆಡೆ ಸುಡುಗಾಡಿನಂತಾದ ರಾಜ್ಯದಲ್ಲಿ ಜನರು ತುತ್ತು ಆಹಾರಕ್ಕೂ ಪರದಾಡುವಂತಾಗಿ ಸಾಯತೊಡಗಿದರು.

ಒಂದೆಡೆ ಹೀಗಿರಲು ಅತ್ತ ಕೌಶಿಕ ಮುನಿ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಸಮುದ್ರತೀರದಲ್ಲಿ ತಪಸ್ಸನ್ನು ಆಚರಿಸತೊಡಗಿದ್ದನು. ಈ ಸಮಯ ಮಳೆ ಸುರಿಯದೆ ಎಲ್ಲೆಡೆ ಉಂಟಾದ ಬರಗಾಲದಿಂದಾಗಿ ಸಂನ್ಯಾಸ ಸ್ವೀಕರಿಸಿ ಆಶ್ರಮವಾಸಿಗಳಾಗಿದ್ದ ಕೌಶಿಕ ಮುನಿಯ ಸಂಸಾರವೂ ಜೀವಿಸುವುದಕ್ಕೆ ದಾರಿಗಾಣದಾಗಿ ಹೋಯಿತು. ಹೀಗೆ ಅಸಹಾಯಕರಾದ ಕೌಶಿಕ ಮುನಿಯ ಸಂಸಾರವನ್ನು ಕಂಡ ಸತ್ಯವ್ರತ ಆ ಕುಟುಂಬವನ್ನು ಸಂರಕ್ಷಿಸುವ ಭಾರ ಹೊತ್ತು ತನ್ನಿಂದಾದ ಸಹಾಯ ಮಾಡತೊಡಗಿದನು. ಹೀಗಿರಲು ಒಂದು ದಿನ ಮಾಂಸ ಭಕ್ಷಕನಾಗಿದ್ದ ಆತನಿಗೆ ಎಲ್ಲಿಯೂ ಮಾಂಸ ದೊರಕದೆ ಹಸಿವಿನಿಂದ ಕಂಗಾಲಾಗಿ ಹೋದನು. ಅನ್ಯ ದಾರಿ ಕಾಣದಾದ ಸತ್ಯವ್ರತ ಬ್ರಹ್ಮರ್ಷಿ ವಸಿಷ್ಠರ ಆಕಳೊಂದನ್ನು ಅಪಹರಿಸಿ, ಅದನ್ನು ಕೊಂದು, ಅದರ ಮಾಂಸವನ್ನು ಸಂಸ್ಕಾರಮಾಡದೆ ತಾನೂ ತಿಂದು ಕೌಶಿಕ ಮುನಿಯ ಕುಟುಂಬದವರಿಗೂ ಊಟ ಮಾಡಿಸಿದನು. ಈ ಸಮಾಚಾರವನ್ನು ತಿಳಿದ ವಸಿಷ್ಠರು ಕೋಪಗೊಂಡು “ನೀನು ಪರಸ್ತ್ರೀಯನ್ನು ಅಪಹರಿಸಿದ ದೋಷಿಯಾಗಿರುವೆ. ಸಲಹಿದ ತಂದೆಗೆ ಅಸಹನೀಯ ದುಃಖವನ್ನುಂಟು ಮಾಡಿ ಪಿತನ ಶಾಪಕ್ಕೆ ತುತ್ತಾಗಿರುವೆ. ಮಾತ್ರವಲ್ಲ ಕುಲಗುರುವಿನ ಹಸುವನ್ನು ಕದ್ದು ಭೋಗಿಸಿರುವೆ. ಈ ರೀತಿಯಾಗಿ ಮೂರು ಶಂಕು (ಪಾಪ) ಗಳನ್ನು ಅದೂ ಮಹಾಪಾತಕ ಕೃತ್ಯಗಳನ್ನೆಸಗಿ ಪತಿತನಾಗಿರುವೆ. ಈ ಮೂರು ಪಾತಕಗಳನ್ನೆಸಗಿದ ನಿನ್ನನ್ನು ಜನ ತ್ರಿಶಂಕು ಎಂದು ಕರೆಯಲಿ” ಎಂದು ಶಾಪವಿತ್ತರು. ಅಂದಿನಿಂದ ಸತ್ಯವ್ರತ ತ್ರಿಶಂಕುವಾದನು. ಸತ್ಯವ್ರತನ ಬದುಕಿನಲ್ಲಿ ಎರಡನೆಯ ಶಾಪ ಪ್ರಾಪ್ತವಾಯಿತು.

ಹೀಗಿರಲು ತಪಸ್ಸನ್ನಾಚರಿಸುತ್ತಿದ್ದ ಕೌಶಿಕ ಮುನಿ ಬಹಿರ್ಮುಖನಾಗಿ ಎದ್ದಾಗ, ಬರಗಾಲ ಆವರಿಸಿರುವ ಸಂಗತಿ ತಿಳಿಯಿತು. ಸಂನ್ಯಾಸ ಸ್ವೀಕರಿಸಿದ್ದರೂ ತನ್ನ ಸಂಸಾರದ ಬಗ್ಗೆ ನೆನಪಾಗಿ ಯೋಚಿಸಿದಾಗ, ಕ್ಷಾಮಕಾಲದಲ್ಲಿ ಅವರೆಲ್ಲರನ್ನು ಆಹಾರವಿತ್ತು ಕಾಪಾಡಿದ ಸತ್ಯವ್ರತನ ವಿಚಾರ ತಿಳಿಯಿತು. ಸತ್ಯವ್ರತ ವಸಿಷ್ಠರ ಶಾಪದ ಕಾರಣದಿಂದ ತ್ರಿಶಂಕು ನಾಮಕನಾಗಿರುವ ಸತ್ಯ ವೇದ್ಯವಾಯಿತು. ಆದರೆ ಬರಗಾಲದಲ್ಲಿ ಸಂಕಷ್ಟದ್ದಲ್ಲಿದ್ದ ತನ್ನ ಸಂಸಾರವನ್ನು ಸಂರಕ್ಷಿಸಿದ ಸತ್ಯವ್ರತನ ಬಗ್ಗೆ ತಿಳಿದು ಮುನಿ ಕೌಶಿಕನಿಗೆ ಬಹಳಷ್ಟು ಸಂತೋಷವಾಯಿತು. ಆತ ಹೇಗೆ ಕಾಪಾಡಿದ? ಏನು ಮಾಡಿದ್ದಾನೆ ಎನ್ನುವುದಕ್ಕಿಂತ ರಕ್ಷಣೆ ಮಾಡಿದ್ದಾನಲ್ಲಾ ಎಂಬ ವಿಷಯ ಈ ಮುದಕ್ಕೆ ನಾಂದಿಯಾಯಿತು. ಮುನಿ ಸತ್ಯವ್ರತನ ಪೂರ್ಣ ವ್ರತ್ತಾಂತವನ್ನು ತಿಳಿದ ಬಳಿಕ ಆತನ ಬಗ್ಗೆ ಕನಿಕರವೂ ಮೂಡಿತು. ಛೆ ಸತ್ಯವ್ರತ ರಾಜ ಕುಮಾರ, ಆತನ ಬದುಕು ಏನೇನೊ ಆಗಿ ಈಗ ತ್ರಿಶಂಕುವಾಗಿದ್ದಾನೆ. ಹಾಗಾಗಿ ಪ್ರತ್ಯುಪಕಾರವಾಗಿ ಆತನಿಗೇನಾದರು ಸಹಾಯ ಮಾಡಬೇಕು ಎಂದು ಮುನಿ ಕೌಶಿಕ ಯೋಚಿಸತೊಡಗಿದನು. ನೇರವಾಗಿ ತ್ರಿಶಂಕುವನ್ನು ಸಂಧಿಸಿ ಸಂತೈಸುವ ತೀರ್ಮಾನ ಮಾಡಿದನು. ಇಲ್ಲಿ ಕೌಶಿಕನ ನಿರ್ಣಯಕ್ಕೆ ಪ್ರೇರಕವಾದದ್ದು ವಸಿಷ್ಠರ ಮೇಲಿನ ಕೋಪವೊ? ಅಥವಾ ಆಪತ್ಕಾಲದಲ್ಲಿ ತನ್ನ ಸಂಸಾರವನ್ನು ರಕ್ಷಿಸಿದ್ದಾನೆ ಸತ್ಯವ್ರತ ಎಂಬ ಮಮಕಾರವೊ! ಅಂತೂ ಯಾವುದೊ ಒಂದು ಕಾರಣದಿಂದ ಕೌಶಿಕ ಮುನಿ ಈ ನಿರ್ಧಾರಕ್ಕೆ ಬಂದಾಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page