
ಬೈಲೂರು: ಇಲ್ಲಿನ ಪರಶುರಾಮ ಥೀಮ್ ಪಾರ್ಕ್ನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕೆಂಬ ಆಗ್ರಹದೊಂದಿಗೆ ಸೆ.24ರಂದು ಜನಾಗ್ರಹ ಸಭೆ ಆಯೋಜಿಸಲಾಗಿದೆ.
ಬೈಲೂರಿನ ಮಾರಿಗುಡಿಯ ಸಭಾಭವನದಲ್ಲಿ ಸೆ.24ರ ಗುರುವಾರ ಸಂಜೆ 5 ಗಂಟೆಗೆ ಸಭೆ ನಡೆಯಲಿದೆ. ಪಾರ್ಕ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸುವಂತೆ ಒತ್ತಾಯಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ.
ಸಭೆಯ ಪೂರ್ವಭಾವಿಯಾಗಿ ಊರಿನ ಪ್ರಮುಖರ ಸಮ್ಮುಖದಲ್ಲಿ ನಿನ್ನೆ ಸಭೆ ನಡೆಯಿತು. ಯರ್ಲಪಾಡಿ, ನೀರೆ, ಕಣಂಜಾರು, ಬೈಲೂರು ಹಾಗೂ ಕೌಡೂರು ಭಾಗಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಜನಾಗ್ರಹ ಸಭೆಯ ಕುರಿತು ಚರ್ಚಿಸಿದರು.
ಪೂರ್ವಭಾವಿ ಸಭೆಯಲ್ಲಿ ಸುಮಿತ್ ಶೆಟ್ಟಿ ಬೈಲೂರು, ಮನೀಶ್ ಶೆಣೈ, ರಮೇಶ್ ಕಿಣಿ, ಪ್ರಶಾಂತ ಕುಮಾರ್, ಸಚ್ಚಿದಾನಂದ ಶೆಟ್ಟಿ, ಉದಯಕುಮಾರ್ ಶೆಟ್ಟಿ ಯರ್ಲಪಾಡಿ, ಸುರೇಶ ಶೆಟ್ಟಿ ಸಾಯಿರಾಂ, ರವೀಂದ್ರ ನಾಯಕ್ ನೀರೆ, ಸಚ್ಚಿದಾನಂದ ಪ್ರಭು ಕಣಂಜಾರು, ಸುನಿಲ್ ಹೆಗ್ಡೆ ಗೋವಿಂದೂರು, ವಾಸು ಪೂಜಾರಿ ಗೋವಿಂದೂರು, ವಿನೂಪ್ ಹೆಗ್ಡೆ ಕಣಂಜಾರು, ಜಗದೀಶ್ ಪೂಜಾರಿ ಕೌಡೂರು, ನಾಗೇಶ್ ಪೂಜಾರಿ ಕೌಡೂರು, ದಿಲೀಪ್ ಬೈಲೂರು, ರಮೇಶ್ ಶೆಟ್ಟಿ ಕಲ್ಲೊಟ್ಟೆ, ಸುರೇಶ ಸಾಲ್ಯಾನ್, ಮಂಜುನಾಥ ಬೈಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.































































































































