
ಕಾರ್ಕಳ: ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನಾಚರಣೆಯ ಪ್ರಯುಕ್ತ ‘ಆಶೀರ್ವಾದದ ದೀಪ’ ಕಾರ್ಯಕ್ರಮವನ್ನು ಚೇತನಾ ವಿಶೇಷ ಶಾಲೆಯ ಮಕ್ಕಳೊಂದಿಗೆ ಆಚರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯುಷ್ಯ, ಆರೋಗ್ಯ ಹಾಗೂ ಉತ್ತಮ ಭವಿಷ್ಯ ಲಭಿಸಲಿ ಎಂಬ ಆಶಯದೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ವಿಶೇಷ ಶಾಲೆಯ ಮಕ್ಕಳೊಂದಿಗೆ ಸಂತೋಷದಿಂದ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಯರಾಮ್ ಸಾಲಿಯಾನ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಘನಾಥ್ ಶೆಟ್ಟಿ, ಮೋಹನ್ ಶೆಟ್ಟಿ ಬೋಳ, ಸುದೀರ್ ನಿಟ್ಟೆ, ಕಿರಣ್ ಕುಲಾಲ್ ಬೋಳ, ಕಿರಣ್ ಶೆಟ್ಟಿ ಬೋಳ ಹಾಗೂ ವಿಶಾಲ್ ಸಾಲ್ಯಾನ್ ಬೋಳ ಉಪಸ್ಥಿತರಿದ್ದರು.






























































































































