21ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ಯಶಸ್ವಿ

ಕಾರ್ಕಳದ ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್ ಮತ್ತು ರೋಟರಿ ಆ್ಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಶ್ರೀ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಕಾರ್ಕಳದಲ್ಲಿ ಆಯೋಜಿಸಲಾಗಿದ್ದ 21ನೇ ವರ್ಷದ “ಮುದ್ದು ಕೃಷ್ಣ ಸ್ಪರ್ಧೆ” ಮತ್ತು ಚಿತ್ರಕಲಾ ಸ್ಪರ್ಧೆವು ಯಶಸ್ವಿಯಾಗಿ ಜರುಗಿತು.
ಕಾರ್ಕಳ ತಾಲೂಕಿನ ಮತ್ತು ಆಸುಪಾಸಿನ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3182ರ ವಲಯ-5ರ ಸಹಾಯಕ ಗವರ್ನರ್ ರೋ. ಕೆ. ಸುರೇಶ್ ನಾಯಕ್ ಹಾಗೂ ಡಿ.ಆರ್.ಸಿ.ಸಿ ರೋ. ಡಾ. ಸುರೇಶ್ ಶೆಣೈ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷ ರೋ. ಕೆ. ವಿಜೇಂದ್ರ ಕುಮಾರ್, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಆ್ಯನ್. ಜ್ಯೋತಿ ಎಸ್ ಶೆಟ್ಟಿ, ಕಾರ್ಯದರ್ಶಿ ಆ್ಯನ್ ಸವಿತಾ ಹೆಗ್ಡೆ ಮತ್ತು ಸಭಾಪತಿ ಆ್ಯನ್ ಗೀತಾ ಎಸ್ ಕಾಮತ್
ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಪ್ರಾಪ್ತಿ ಪೂಜಾರಿ, ಕಾರ್ಯದರ್ಶಿ ಲಕ್ಷ್ಮಿ ಕಾಮತ್, ಸಭಾಪತಿ ರೋ. ಬಾಲಕೃಷ್ಣ, ದೇವಾಡಿಗ, ಕಾರ್ಯದರ್ಶಿ ರೋ. ಉದಯಕುಮಾರ್ ಕಡಂಬ , ರೋ.ಇಕ್ಬಾಲ್ ಅಹಮ್ಮದ್ ಮತ್ತು ಇತರ ರೊಟೇರಿಯನ್ಸ್, ರೊಟ್ರಾಕ್ಟರ್ಸ್ ಮತ್ತು ಆ್ಯನ್ಸ್ ಸದಸ್ಯೆಯರು ಭಾಗವಹಿಸಿದ್ದರು.




































