
ಮುಗ್ಧ ಮನದಲ್ಲಿ ಅಕ್ಷರ ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ, ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು. ಇಂತಹ ಶಿಕ್ಷಕರ ದಿನಾಚರಣೆಯನ್ನು ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದರು. ಹಾಡು ನೃತ್ಯಗಳ ಮೂಲಕ ಶಿಕ್ಷಕರನ್ನು ರಂಜಿಸಿದರು. ಎಲ್ಲಾ ಶಿಕ್ಷಕರು ಸಂಭ್ರಮದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಆಡಳಿತ ಅಧಿಕಾರಿ ಪ್ರಣೀತ್ ರವರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು ಶ್ರೀಮತಿ ಮಮತಾರವರು ಉಪಸ್ಥಿತರಿದ್ದರು.




































