
ಜೂನ್ ತಿಂಗಳಲ್ಲಿ ತೆಲಂಗಾಣದ ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಶ್ರೀ ಶಶಿಧರ ಶೆಟ್ಟಿ ಮತ್ತು ಶ್ರೀ ಚೇತನಾ ಕುಮಾರ್ ಬಿ ಅವರು ತೇರ್ಗಡೆಯಾಗಿ ರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಕಾರ್ಕಳ ತಾಲೂಕಿನಿಂದ ಪ್ರಪ್ರಥಮ ರಾಷ್ಟ್ರೀಯ ತೀರ್ಪುಗಾರರಾಗಿದ್ದು, ಅವರ ಈ ಸಾಧನೆಗಾಗಿ ಜೇಸಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ, ಆಡಳಿತ ಅಧಿಕಾರಿ ಪ್ರಣೀತ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶ್ರೀಮತಿ ವಂದನಾ ರೈ ಹಾಗೂ ಶ್ರೀಮತಿ ಶಾಲಿನಿ ಯವರು ಸನ್ಮಾನ ಪತ್ರ ವಾಚಿಸಿದರು.




































