28.9 C
Udupi
Friday, September 4, 2026
spot_img
spot_img
HomeBlogಮಹಿಳೆಯರ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು

ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು

ಮಹಿಳಾ ಸಮೃದ್ಧಿ ಯೋಜನೆ ಸಂಪೂರ್ಣ ಮಾಹಿತಿ

ಮಹಿಳಾ ಸಮೃದ್ಧಿ ಯೋಜನೆ: ಸ್ವಂತ ಉದ್ಯಮ ಅಥವಾ ಸಣ್ಣ ವ್ಯಾಪಾರ ಆರಂಭಿಸುವ ಕನಸು ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದ ಮಹಿಳಾ ಸಮೃದ್ಧಿ ಯೋಜನೆ ಆರ್ಥಿಕ ನೆರವಿನ ಅವಕಾಶ ಒದಗಿಸುತ್ತದೆ. ಬಂಡವಾಳದ ಕೊರತೆಯಿಂದ ಸ್ವಯಂ ಉದ್ಯೋಗದ ಕನಸು ಕೈಬಿಡಬೇಕಿಲ್ಲ ಎಂಬ ಉದ್ದೇಶದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

ಏನಿದು ಮಹಿಳಾ ಸಮೃದ್ಧಿ ಯೋಜನೆ?

ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಸಣ್ಣ ವ್ಯಾಪಾರ, ಕರಕುಶಲತೆ ಸೇರಿದಂತೆ ಆದಾಯ ತರುವ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಆರಂಭಿಸಲು ಸಾಲ ನೀಡಲಾಗುತ್ತದೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮವು myScheme ಪೋರ್ಟಲ್ ಹಾಗೂ ಸಂಬಂಧಪಟ್ಟ ಚಾನೆಲೈಸಿಂಗ್ ಏಜೆನ್ಸಿಗಳ ಮೂಲಕ ಯೋಜನೆಯನ್ನು ಜಾರಿಗೊಳಿಸುತ್ತದೆ.

ಪ್ರಮುಖ ಪ್ರಯೋಜನಗಳು

ಸಾಲದ ಮೊತ್ತ: ಯೋಜನಾ ವೆಚ್ಚದ ಶೇ.90ರಷ್ಟು, ಗರಿಷ್ಠ ಸುಮಾರು 1.25 ರಿಂದ 1.40 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.

ಬಡ್ಡಿದರ: ವಾರ್ಷಿಕ ಶೇ.4ರಿಂದ ಶೇ.6ರಷ್ಟು ಕಡಿಮೆ ಬಡ್ಡಿದರ.

ಮರುಪಾವತಿ: ಮಾಸಿಕ ಅಥವಾ ತ್ರೈಮಾಸಿಕ ಕಂತುಗಳಲ್ಲಿ ಸಾಲವನ್ನು ಮರುಪಾವತಿಸಲು ಅವಕಾಶ.

ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ಮೀರಿರಬಾರದು. SC, ST, OBC ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಸ್ವಸಹಾಯ ಸಂಘದ ಸದಸ್ಯರೂ ಯೋಜನೆಯ ಸೌಲಭ್ಯ ಪಡೆಯಬಹುದು.

ಅಗತ್ಯ ದಾಖಲೆಗಳು..

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ವಿವರಗಳು ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಗತ್ಯವಿದೆ. SHG ಸದಸ್ಯರಾಗಿದ್ದರೆ ಸಂಬಂಧಪಟ್ಟ ಗುರುತಿನ ಚೀಟಿಯನ್ನೂ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?…

ಯೋಜನೆಗೆ ಆಫ್‌ಲೈನ್ ಅಥವಾ ಸಂಬಂಧಪಟ್ಟ ರಾಜ್ಯಗಳ ಚಾನೆಲೈಸಿಂಗ್ ಏಜೆನ್ಸಿಗಳ ಸೂಚನೆಯಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಸಂಬಂಧಪಟ್ಟ ನಿಗಮ ಅಥವಾ ಇಲಾಖೆಯ ಮೂಲಕ ಮಾಹಿತಿ ಪಡೆಯಬಹುದು.

ಅರ್ಜಿದಾರರು ತಮ್ಮ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮ ಅಥವಾ ಸಂಬಂಧಪಟ್ಟ ಬ್ಯಾಂಕ್‌ಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆಯಬೇಕು. ವೈಯಕ್ತಿಕ ಹಾಗೂ ಪ್ರಸ್ತಾವಿತ ಉದ್ಯಮದ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ದಾಖಲೆ ಮತ್ತು ಅರ್ಹತೆ ಪರಿಶೀಲನೆಯ ಬಳಿಕ ಸಾಲ ಮಂಜೂರಾತಿ ಪ್ರಕ್ರಿಯೆ ಮುಂದುವರಿಯಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page