
ಕಾರ್ಕಳ: ರಾಜಾಪುರ ಸಾರಸ್ವತ ಸೊಸೈಟಿ (ಲಿ) ಇದರ ಮಹಾಸಭೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ಶ್ರೀ ಮಹಾಲಕ್ಷ್ಮಿ ಮಹಿಳಾ ಯಕ್ಷಕಲಾ ಮಂಡಳಿ ಲಕ್ಷ್ಮಿಪುರ ಇವರಿಂದ ‘ದ್ರೌಪದಿ ಪ್ರತಾಪ’ ಎಂಬ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 6ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಕಾರ್ಕಳದ ಜೋಡುರಸ್ತೆಯಲ್ಲಿರುವ ಸಹಕಾರ ಸಿಂಧೂರ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಭಾಗವತರಾಗಿ ನೀಲಾವರ ಕೇಶವ ಆಚಾರ್ಯ, ಚೆಂಡೆ ವಾದಕರಾಗಿ ಭಾಸ್ಕರ ಆಚಾರ್ಯ ಹಾಗೂ ಮದ್ದಳೆ ವಾದಕರಾಗಿ ಗೋಪಾಲಕೃಷ್ಣ ಮಯ್ಯ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಉಷಾ ನಾಯಕ್, ಶೋಭಾ ಪ್ರಭು, ಶ್ರೀನಿಧಿ, ಪ್ರಿಯಾಂಕಾ ಸೇರಿದಂತೆ ಕಲಾವಿದರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಕ್ಷಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿದ್ದಾರೆ.























































































