
ಸೋದರತೆಯ ಬಾಂಧವ್ಯವನ್ನು ಪ್ರತಿಬಿಂಬಿಸುವ ರಕ್ಷಾಬಂಧನ ಕಾರ್ಯಕ್ರಮವನ್ನು ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾದ ಜೇಸಿಐ ಬೆಳ್ಮಣ್ ನ ಅಧ್ಯಕ್ಷರಾದ ಜೇಸಿ ವೀರೇಂದ್ರರವರು ರಕ್ಷಾಬಂಧನ ಕಾರ್ಯಕ್ರಮ ಈ ರೀತಿ ಇದೆ ಎಂದು ನಾನು ಎಣಿಸಿರಲಿಲ್ಲ. ತುಂಬಾ ಸಂತೋಷವಾಗುತ್ತಿದೆ. ಇಲ್ಲಿ ಒಳ್ಳೆಯ ಸಂಸ್ಕೃತಿ ಇದೆ. ಇದು ನನ್ನ ಬಾಲ್ಯದ ನೆನಪು ಮಾಡಿಕೊಟ್ಟಿದೆ. ನನ್ನ ಮಗುವಿಗೂ ಇಂತಹ ಶಾಲೆ ಬೇಕೆನಿಸುತ್ತಿದೆ ಎಂದರು.
ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ಕುಮಾರಿ ಸ್ನೇಹಾ ರವರು ಮಾತನಾಡುತ್ತಾ, ಈ ಶಾಲೆ ನನಗೆ ಶಿಸ್ತು ಕಲಿಸಿದೆ. ಚಿತ್ತರಂಜನ್ ಸರ್ ಅವರು ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ. ನಾನು ಆಳ್ವಾಸ್ ಕಾಲೇಜಿಗೆ ಸೇರಿದಾಗ ಯಾವ ಸ್ಕೂಲಿನಿಂದ ಬಂದದ್ದು ಎಂದು ಅವರು ಕೇಳಿದಾಗ, ಜೇಸಿ ಶಾಲೆ ಎಂದು ಹೆಮ್ಮೆಯಿಂದ ಹೇಳಿದ್ದೆ. ಇಲ್ಲಿ ಎಲ್ಲಾ ಶಿಕ್ಷಕರು ಪ್ರೋತ್ಸಾಹ ನೀಡಿದ್ದಾರೆ ಎಂದರು.
ಜೇಸಿ ಚಿತ್ತರಂಜನ್ ಶೆಟ್ಟಿ ಅವರು ಭಾವನೆಗಳಿಗೆ ಬೆಲೆ ಕೊಟ್ಟಾಗ ಜಗತ್ತಿನಲ್ಲಿ ಸ್ವಾರ್ಥ, ಜಗಳಗಳಿಗೆ ಅವಕಾಶವಿರುವುದಿಲ್ಲ. ಸರಿಯಾದ ಕೆಲಸವನ್ನು ಮಾಡುವುದು, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಬದುಕುವುದೇ ಧರ್ಮ. ನಿಮಗೆ ರಕ್ಷೆ ಕಟ್ಟಿದವರಿಗೆ ಸಹಾಯ ಮಾಡಿ. ಅವರನ್ನು ರಕ್ಷಣೆ ಮಾಡಿ.ಜೀವನದಲ್ಲಿ ಸಹೋದರತೆಯಿಂದ ಬಾಳಿ ಎಂದರು.
ಕಾರ್ಯಕ್ರಮದಲ್ಲಿ ಜೇಸಿ ಅವಿನಾಶ್ ಶೆಟ್ಟಿ ಯವರು, ಜೇಸಿ ವಿಘ್ನೇಶ್ ರವರು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಆಡಳಿತಾಧಿಕಾರಿ ಉಪಸ್ಥಿತರಿದ್ದರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಪ್ರತಿಮಾ ರವರು ನಿರೂಪಿಸಿ, ಶ್ರೀಮತಿ ವಿನಿತಾರವರು ವಂದಿಸಿದರು.





















































































