‘ಭೀಷ್ಮ ಸೇನಾಧಿಪತ್ಯ ಹಾಗೂ ಸುದರ್ಶನ ದರ್ಶನ’ ಪ್ರಸಂಗ

ಕಾರ್ಕಳ: ಯಕ್ಷಮಿತ್ರರು ದುರ್ಗ, ಕಾರ್ಕಳ ಇವರ ಆಶ್ರಯದಲ್ಲಿ ಆ.30ರಂದು ದುರ್ಗದ ವನಾರಾಮ್ ರೆಸಾರ್ಟ್ಸ್‌ನಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
‘ಭೀಷ್ಮಸೇನಾಧಿಪತ್ಯ ಹಾಗೂ ಸುದರ್ಶನ ದರ್ಶನ’ ಎಂಬ ಪ್ರಸಂಗ ನಡೆಯಲಿದ್ದು ರವಿವಾರ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.
ಕಾರ್ಯಕ್ರಮದಲ್ಲಿ ಪದ್ಯಾಣ ಗೋವಿಂದ ಭಟ್, ತಲಪಾಡಿ ದೇವೀಪ್ರಸಾದ ಆಳ್ವ, ಅವಿನಾಶ ಬೈಪಡಿತ್ತಾಯ, ಶ್ರೇಯಸ್ ಪಾಳಂದೆ ಹಾಗೂ ಕೌಸ್ತುಭ ಕನ್ಯಾಡಿ ಅವರು ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.
ಅರ್ಥಧಾರಿಗಳಾಗಿ ಡಾ. ಎಂ. ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್, ವಿದ್ವಾನ್ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಕಟೀಲು ಹಾಗೂ ವಾದಿರಾಜ ಕಲ್ಲೂರಾಯ ಅವರು ಪಾಲ್ಗೊಳ್ಳಲಿದ್ದಾರೆ.
ದೀಪ ಪ್ರಜ್ವಾಲನೆಯನ್ನು ಕಾರ್ಕಳದ ಉಷಾಲಕ್ಷಿ ಜುವೆಲ್ಲರ್ಸ್ ನ ರೋಹಿತ್ ಆಚಾರ್ಯ ನೆರವೇರಿಸಲಿದ್ದು ಸರ್ವರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ವಿಳಾಸ: ವನಾರಾಮ್ ರೆಸಾರ್ಟ್, ದುರ್ಗ, ದುರ್ಗ ವಾಟರ್ ಫಾಲ್ಸ್ ಬಳಿ, ಕಾರ್ಕಳ





















































































