
ದಳಗಳ ಹಂತದಲ್ಲಿ ಸ್ಕೌಟಿಂಗ್ ಗೈಡಿಂಗ್ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ, ಕರ್ನಾಟಕದಾದ್ಯಂತ ಘಟಕ ಮಟ್ಟದಲ್ಲಿ ಸ್ಕೌಟಿಂಗ್ ಮತ್ತು ಗೈಡಿಂಗ್ ಚಟುವಟಿಕೆಗಳ ಗುಣಮಟ್ಟ ಹಾಗೂ ಪರಿಣಾಮಕಾರತ್ವವನ್ನು ಹೆಚ್ಚಿಸಲು, ಮತ್ತಷ್ಟು ಬಲಪಡಿಸುವ ಅವಕಾಶ ಇರುವುದರಿಂದ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಚಳವಳಿಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಲು ಮಾನ್ಯ ಆಯುಕ್ತರು ಸಮಿತಿಯನ್ನು ರಚಿಸಿದ್ದು .ಈ ಸಮಿತಿಯ ಸದಸ್ಯರನ್ನಾಗಿ ಶ್ರೀಮತಿ ವಂದನಾ ರೈ ಇವರನ್ನು ರಾಜ್ಯ ಆಯುಕ್ತರದ ಶ್ರೀ ಪಿ.ಜಿ.ಆರ್ ಸಿಂದ್ಯರವರು ನಾಮ ನಿರ್ದೇಶನ ಮಾಡಿರುತ್ತಾರೆ.
ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸುದ್ದಿಗೆ ಶಾಲಾ ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದು. ಎಲ್ಲಾ ಶಿಕ್ಷಕರು ಶ್ರೀಮತಿ ವಂದನಾ ರೈಯವರನ್ನು ಅಭಿನಂದಿಸಿದ್ದಾರೆ.





















































































