
ಕಾರ್ಕಳ : ಆಗಸ್ಟ್ 22ರಂದು ಜಿ. ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಶಾಲಾ ಐಕ್ಸ್ ಜಿ.ಎಂ.ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಹಿರಿಯ ಬಾಲಕರ ವಿಭಾಗದಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಾದ ಶ್ರೀಶ್ ಎಸ್ ಆಚಾರ್,ಅಶ್ವಿನ್ ಶೆಟ್ಟಿ,ಇಶಾನ್ ಹೆಗ್ಡೆ, ಶ್ರೇಯಸ್ ಎಸ್. ಆಚಾರ್ಯ ಇವರು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆಯುವುದರ ಜೊತೆಗೆ ವಯಕ್ತಿಕ ವಿಭಾಗದಲ್ಲಿ ಅಶ್ವಿನ್ ಶೆಟ್ಟಿ ಇವರು ಚಾಂಪಿಯನ್ ಶಿಪ್ ಪಡೆದಿರುತ್ತಾರೆ.ಇವರಿಗೆ ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ ಶುಭ ಹಾರೈಸುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾ ಯು.ಶೆಟ್ಟಿ ಹಾಗೂ ಸುದರ್ಶನ್ ಇವರು ತರಬೇತಿಯನ್ನು ನೀಡಿರುತ್ತಾರೆ.



















































































