
ಬೆಂಗಳೂರು: ಹಲವು ಸುತ್ತಿನ ಸಭೆ ಹಾಗೂ ಚರ್ಚೆಗಳ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ 13 ಸಚಿವರಿಗೆ ವಿವಿಧ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ.
ಎನ್. ಚಲುವರಾಯಸ್ವಾಮಿ ಅವರಿಗೆ ಕೃಷಿ ಇಲಾಖೆ ಹಾಗೂ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಹೌಸಿಂಗ್ ಮತ್ತು ವಕ್ಫ್ ಇಲಾಖೆಯ ಹೊಣೆ ವಹಿಸಲಾಗಿದೆ. ಈ ನಡುವೆ ಕೆ.ಎಚ್. ಮುನಿಯಪ್ಪ ಅವರು ತಮಗೆ ಸಮಾಜ ಕಲ್ಯಾಣ ಇಲಾಖೆ ನೀಡುವಂತೆ ಪಟ್ಟು ಹಿಡಿದಿದ್ದು, ಅವರ ಬೇಡಿಕೆಯಂತೆ ಅದೇ ಖಾತೆ ನೀಡಲಾಗಿದೆ.
13 ಸಚಿವರಿಗೆ ಖಾತೆ ಹಂಚಿಕೆ…
ಒಟ್ಟು 19 ಸಚಿವರ ಪೈಕಿ 13 ಮಂದಿಗೆ ಮಾತ್ರ ಸದ್ಯ ಖಾತೆ ಹಂಚಿಕೆಯಾಗಿದ್ದು, ಉಳಿದ 6 ಸಚಿವರಿಗೆ ಖಾತೆ ಹಂಚಿಕೆ ಬಾಕಿ ಇದೆ. ಅಂತಿಮ ಪಟ್ಟಿಯನ್ನು ಅನುಮೋದನೆಗಾಗಿ ರಾಜಭವನಕ್ಕೆ ಕಳುಹಿಸಲಾಗುವುದು.
ಯಾರಿಗೆ ಯಾವ ಖಾತೆ?.
ಚಲುವರಾಯಸ್ವಾಮಿ – ಕೃಷಿ
ರಿಜ್ವಾನ್ ಅರ್ಷದ್ – ಆಹಾರ
ಮುನಿಯಪ್ಪ – ಸಮಾಜ ಕಲ್ಯಾಣ
ಸಂತೋಷ್ ಲಾಡ್ – ಕಾರ್ಮಿಕ
ಬಸಂತಪ್ಪ – ಮೀನುಗಾರಿಕೆ
ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ
ರಾಯರೆಡ್ಡಿ – ಉನ್ನತ ಶಿಕ್ಷಣ
ಜಮೀರ್ – ಹೌಸಿಂಗ್ ಮತ್ತು ವಕ್ಫ್
ಲಕ್ಷ್ಮಣ ಸವದಿ – ಸಹಕಾರಿ
ಅಜಯ್ ಸಿಂಗ್ – ಅರಣ್ಯ
ಎಸ್.ಎಸ್. ಮಲ್ಲಿಕಾರ್ಜುನ – ಗಣಿ
ಬಾಲಕೃಷ್ಣ – ಸಣ್ಣ ನೀರಾವರಿ
ಪುಟ್ಟರಂಗ ಶೆಟ್ಟಿ – ಪಶು ಸಂಗೋಪನೆ



























































