150ಕ್ಕೂ ಅಧಿಕ ವಿದ್ಯಾರ್ಥಿಗಳ ಭಾಗಿ..

ರೋಟರಿ ಕ್ಲಬ್ , ರೋಟರಿ ಆನ್ಸ್ ಕ್ಲಬ್ ಹಾಗೂ ರೋಟರಾಕ್ಸ್ ಕ್ಲಬ್ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 09.08.2026ರಂದು ಪೆರ್ವಾಜೆ ಶಾಲಾ ವಠಾರದಲ್ಲಿ ಎಲ್‌ಕೆಜಿ ಮಕ್ಕಳಿಂದ ಹಿಡಿದು 10ನೇ ತರಗತಿಯವರೆಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಛದ್ಮವೇಶ, ಅಭಿನಯ ಗೀತೆ, ಚಿತ್ರಕಲಾ, ದೇಶಭಕ್ತಿ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿದ್ದು 27 ಶಾಲೆಗೆ ವೈಯಕ್ತಿಕವಾಗಿ ಸ್ಪರ್ಧೆಗೆ ಮಕ್ಕಳನ್ನು ಆಮಂತ್ರಿಸಿ 150ಕ್ಕೂ ಹೆಚ್ಚಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ವಿಜೇಂದ್ರ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸವಿತಾ ಹೆಗ್ಡೆ , ಆನ್ಸ್ ಕ್ಲಬ್ ಚೇರ್ ಮನ್ ಗೀತಾ ಕಾಮತ್, ರೋಟರಿಯನ್ ಬಾಲಕೃಷ್ಣ ದೇವಾಡಿಗ, ರೋಟರ್ಯಾಕ್ಟರ್ ಸಂದೇಶ್ ಹಾಗೂ ಶಾಲಾ ಮುಖೋಪಾಧ್ಯಾಯರಾದ ದಿವಾಕರ್ ಮತ್ತು ಆಸ್ಮ ಭಾನು ಉಪಸ್ಥಿತರಿದ್ದರು. ಕಾರ್ಯಕ್ರಮವು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.



























































