
ಕಾರ್ಕಳ: ಜೋಡುರಸ್ತೆಯ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಕೆಳಮಹಡಿ ಹಾಗೂ ಎರಡನೇ ಮಹಡಿಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆ ಆ.14ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಒಂದೇ ಸೂರಿನಡಿ ವಿವಿಧ ಗೃಹೋಪಯೋಗಿ ಉತ್ಪನ್ನಗಳು ಲಭ್ಯವಿದ್ದು, ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ವಾಸುದೇವ ಭಟ್ ತಿಳಿಸಿದರು.
ಆ.14ರಿಂದ 25ರವರೆಗೆ ಖರೀದಿಗೆ ಅನುಗುಣವಾಗಿ ವಿಶೇಷ ಗಿಫ್ಟ್‌ಗಳನ್ನು ನೀಡಲಾಗುತ್ತದೆ. ₹10 ಸಾವಿರದಿಂದ ₹25 ಸಾವಿರದವರೆಗಿನ ಖರೀದಿಗೆ ₹1,500ರವರೆಗೆ, ₹50 ಸಾವಿರದವರೆಗೆ ₹2,500, ₹75 ಸಾವಿರದವರೆಗೆ ₹3,500 ಹಾಗೂ ₹75 ಸಾವಿರಕ್ಕೂ ಅಧಿಕ ಖರೀದಿಗೆ ₹5 ಸಾವಿರದವರೆಗೆ ಗಿಫ್ಟ್‌ಗಳು ಲಭ್ಯವಿರಲಿವೆ. ಗ್ರಾಹಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಆ.11ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿ, ಕಾರ್ಕಳದಲ್ಲಿ ಈವರೆಗೆ ಲಭ್ಯವಿರದ ಗುಣಮಟ್ಟದ ಹೊಸ ಉತ್ಪನ್ನಗಳನ್ನು ಸಂಸ್ಥೆ ಪರಿಚಯಿಸಲಿದೆ ಎಂದರು.
ಫೆಡರೇಶನ್ ಆಫ್ ಕರ್ನಾಟಕ ರಾಜ್ಯ ಕ್ವಾರಿ & ಕ್ರಶರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜೆಗೋಳಿ ಮಾತನಾಡಿ, ಆಧುನಿಕ ಸೌಲಭ್ಯಗಳೊಂದಿಗೆ ಆರಂಭವಾಗುತ್ತಿರುವ ಸಂಸ್ಥೆ ಜನತೆಗೆ ಉತ್ತಮ ಸೇವೆ ಒದಗಿಸಲಿದೆ ಎಂದು ಹೇಳಿದರು.
ಆ.14ರಂದು ಬೆಳಗ್ಗೆ 11ಕ್ಕೆ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ರವೀಂದ್ರ ಪ್ರಭು ಕಡಾರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ರಘುಪತಿ ಭಟ್ ಕೆಳಮಹಡಿ ಮಳಿಗೆ ಹಾಗೂ ಉದಯ ಶೆಟ್ಟಿ ಮುನಿಯಾಲು ಎರಡನೇ ಮಹಡಿ ಮಳಿಗೆ ಉದ್ಘಾಟಿಸಲಿದ್ದಾರೆ. ಅಶ್ವತ್ ಎಸ್.ಎಲ್. ವೆಬ್‌ಸೈಟ್ ಅನಾವರಣಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಡಾ. ರವೀಂದ್ರ ಶೆಟ್ಟಿ ಬಜೆಗೋಳಿ, ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.



























































