
ಕಾರ್ಕಳ: ಹಿಂದೂ ಜಾಗರಣ ವೇದಿಕೆ ಕಾರ್ಕಳ ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ’ದ ಅಂಗವಾಗಿ ಆಗಸ್ಟ್ 11ರಂದು ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ.
ಆಗಸ್ಟ್ 11, ಮಂಗಳವಾರ ನಡೆಯಲಿರುವ ಪಂಜಿನ ಮೆರವಣಿಗೆಯು ಬಂಡಿಮಠದಿಂದ ಜೋಡು ರಸ್ತೆಯ ಗಣಪತಿ ಕಟ್ಟೆಯವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.

























































