27.2 C
Udupi
Wednesday, August 5, 2026
spot_img
spot_img
HomeBlogಹೊಸ ಕಾರು, ಬೈಕ್ ಖರೀದಿದಾರರಿಗೆ ಮಹತ್ವದ ಸುದ್ದಿ; ಥರ್ಡ್ ಪಾರ್ಟಿ ವಿಮೆ ಅವಧಿ ಹೆಚ್ಚಳ

ಹೊಸ ಕಾರು, ಬೈಕ್ ಖರೀದಿದಾರರಿಗೆ ಮಹತ್ವದ ಸುದ್ದಿ; ಥರ್ಡ್ ಪಾರ್ಟಿ ವಿಮೆ ಅವಧಿ ಹೆಚ್ಚಳ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಇಲ್ಲ…!

ನವದೆಹಲಿ: ವಾಹನ ವಿಮೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಹೊಸ ವಾಹನಗಳಿಗೆ ಕಡ್ಡಾಯವಾಗಿರುವ ಥರ್ಡ್ ಪಾರ್ಟಿ ಮೋಟರ್ ವಿಮೆಯ ಅವಧಿಯನ್ನು ವಿಸ್ತರಿಸುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (IRDAI) ನಿರ್ದೇಶನ ನೀಡಿದೆ. ಇದರಂತೆ ಹೊಸ ಕಾರುಗಳಿಗೆ ಕಡ್ಡಾಯ ವಿಮೆ 3 ವರ್ಷದಿಂದ 4 ವರ್ಷಕ್ಕೆ ಹಾಗೂ ಹೊಸ ದ್ವಿಚಕ್ರ ವಾಹನಗಳಿಗೆ 5 ವರ್ಷದಿಂದ 6 ವರ್ಷಕ್ಕೆ ಹೆಚ್ಚಳವಾಗಲಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ, ದೇಶದಲ್ಲಿ ಇನ್ನೂ ಹೆಚ್ಚಿನ ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ರಸ್ತೆ ಸುರಕ್ಷತೆ ಮತ್ತು ಅಪಘಾತ ಸಂತ್ರಸ್ತರ ಹಿತದೃಷ್ಟಿಯಿಂದ ವಿಮೆಯ ಅವಧಿಯನ್ನು ವಿಸ್ತರಿಸುವುದು ಅಗತ್ಯ ಎಂದು ತಿಳಿಸಿ, ಈ ಕುರಿತು ಅಗತ್ಯ ಮಾರ್ಗಸೂಚಿಗಳನ್ನು ತಕ್ಷಣ ಜಾರಿಗೆ ತರಲು IRDAIಗೆ ಸೂಚಿಸಿದೆ.

ವಿಮೆ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ, ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಅಳವಡಿಸಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ವಿಮಾ ಡೇಟಾಬೇಸ್ ಮತ್ತು ವಾಹನ್ ಪೋರ್ಟಲ್‌ಗೆ ಜೋಡಿಸುವಂತೆ ನ್ಯಾಯಾಲಯ ಸಲಹೆ ನೀಡಿದೆ. ಜೊತೆಗೆ, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ವಾಹನದ ವಿಮೆ ಪರಿಶೀಲಿಸಿ ದಂಡ ವಿಧಿಸಲು ಮೊಬೈಲ್ ಆ್ಯಪ್ ಅಥವಾ ಡಿಜಿಟಲ್ ಸಾಧನಗಳನ್ನು ಒದಗಿಸುವಂತೆಯೂ ಸೂಚಿಸಿದೆ.

ಇದರ ಜೊತೆಗೆ, ಪೆಟ್ರೋಲ್ ಬಂಕ್‌ಗಳಲ್ಲಿ ವಾಹನದ ವಿಮೆ ಸ್ಥಿತಿಯನ್ನು ಪರಿಶೀಲಿಸುವ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಅಭಿವೃದ್ಧಿಪಡಿಸುವಂತೆ ಶಿಫಾರಸು ಮಾಡಿದ್ದು, ವಿಮೆ ನವೀಕರಿಸುವವರೆಗೆ ವಿಮೆರಹಿತ ವಾಹನಗಳಿಗೆ ಇಂಧನ ಒದಗಿಸುವುದನ್ನು ತಡೆಯುತ್ತದೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಸಂಸದೀಯ ಸಮಿತಿಯ ವರದಿಯನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ದೇಶದಲ್ಲಿರುವ ಸುಮಾರು 304.8 ಮಿಲಿಯನ್ ವಾಹನಗಳಲ್ಲಿ 165.4 ಮಿಲಿಯನ್ ವಾಹನಗಳು ಮಾನ್ಯ ವಿಮೆಯಿಲ್ಲದೆ ಸಂಚರಿಸುತ್ತಿವೆ ಎಂದು ತಿಳಿಸಿದೆ. ಮೋಟಾರು ವಾಹನ ಕಾಯ್ದೆಯಡಿ ಕಡ್ಡಾಯ ತೃತೀಯ ಪಕ್ಷದ ವಿಮೆ ಅಪಘಾತ ಸಂತ್ರಸ್ತರಿಗೆ ತ್ವರಿತ ಪರಿಹಾರ ದೊರಕಿಸುವ ಜೊತೆಗೆ ದೀರ್ಘ ಕಾನೂನು ಹೋರಾಟದಿಂದ ರಕ್ಷಿಸುವ ಉದ್ದೇಶ ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page