
ಅಳದಂಗಡಿ : ತಾಯಿ ಮಗುವನ್ನು ಉಯ್ಯಾಲೆಯಲ್ಲಿಟ್ಟು ತೂಗುವಾಗ ಸಿಗುವ ನೆಮ್ಮದಿಯಂತೆ ಬಡ ಮಕ್ಕಳ ಕೆಲವೊಂದು ಸಣ್ಣ ಸೇವೆ ಕೂಡ ನಮಗೆ ಸಿಗುವ ಸಂತೃಪ್ತಿ ಎಂದು ಆಮಂತ್ರಣ ಉಯ್ಯಾಲೆ ಸೇವಾ ವಿಭಾಗದ ಅಧ್ಯಕ್ಷೆ ಸೌಮ್ಯತಿಲಕ್ ಶೆಟ್ಟಿ ಹೇಳಿದರು.
ಅವರು ಇತ್ತೀಚಿಗೆ ಅಳದಂಗಡಿ ಸರಕಾರಿ ಪದವಿ ಪೂರ್ವ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಆಮಂತ್ರಣ ಸೇವಾ ಪ್ರತಿಷ್ಠಾನದ ತುಳುಸಿಂಗಾರ ಮತ್ತು ಉಯ್ಯಾಲೆ ಸೇವಾ ವಿಭಾಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಮಂತ್ರಣ ತುಳು ಸಿಂಗಾರ ಕಾರ್ಯಕ್ರಮ ಉದ್ಘಾಟನೆಯನ್ನು ಬೆಳ್ತಂಗಡಿ ಧಾರ್ಮಿಕ ಮುಖಂಡರಾದ ಉರುವಾಲು ಕಿರಣ್ ಚಂದ್ರ ಡಿ ಪುಷ್ಪಗಿರಿ ಮಾತಾನಾಡಿ ತುಳು ನಮ್ಮ ಭಾಸೆ ಇದಕ್ಕಾಗಿ ನಾವು ಯಾವುದೇ ಸೇವೆ ತ್ಯಾಗ ಮಾಡಿದರು ಕಡಿಮೆ ಇದನ್ನು ಆಮಂತ್ರಣ ಪರಿವಾರ ಕೂಡ ಮಾಡುತ್ತಿದೆ ಜೊತೆಗೆ
ಇಂದು ಆಮಂತ್ರಣ ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮ ಮಾಡಿ ಹೆಸರು ಪಡೆದಿದ್ದು ಇದರ ಸಾಲಿಗೆ ಉಯ್ಯಾಲೆ ಎನ್ನುವ ಸೇವಾ ಚಟುವಟಿಕೆ ಸೇರಿರುವುದು ಸಂತೋಷದ ವಿಚಾರ ಎಂದರು.
ಆಮಂತ್ರಣ ಉಯ್ಯಾಲೆ ಸೇವಾ ವಿಭಾಗದ ಉದ್ಘಾಟನೆ ನೆರವೇರಿಸಿದ ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಚಯರ್ಮೆನ್ ಸುಮಂತ್ ಕುಮಾರ್ ಜೈನ್ ಮಾತನಾಡಿ
ಮಕ್ಕಳು ದೇವರ ಸಮಾನ ಆದರೆ ಪ್ರತಿಯೊಂದು ಮಗುವಿನ ಅಥವಾ ಮಕ್ಕಳ ಬಾಳು ನಗುವಿನಿಂದ ತುಂಬಿರಲು ಒಂದಷ್ಟು ಪ್ರೀತಿ ಕಾಳಜಿ ಮತ್ತು ಆಸರೆಯಾಗಿ ನಾವು ನಿಲ್ಲಬೇಕಾದ ಅವಶ್ಯಕತೆ ಇದೆ. ಇದಕ್ಕೆ ನಮ್ಮ ಎಕ್ಸೆಲ್ ಶಿಕ್ಷಣ ಸಂಸ್ಥೆ ಕೂಡ ಹಲವಾರು ಕನಸುಗಳನ್ನು ಕಟ್ಟಿ ಕೊಂಡಿದೆ ಆಮಂತ್ರಣ ಜೊತೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.
ಉಯ್ಯಾಲೆ ತಂಡದ ಮೊದಲ ಸೇವಾ ಚಟುವಟಿಕೆ ಅಂಗವಾಗಿ
8 ಜನ ಮಕ್ಕಳಿಗೆ ಪ್ರೋತ್ಸಾಹಧನವನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರರಾದ ಶಿವಪ್ರಸಾದ್
ಅಜಿಲರು ವಿತರಿಸಿ ಇಂತಹ ಆಮಂತ್ರಣ ಪ್ರತಿಷ್ಟಾನದ ಸೇವೆಗಳಿಗೆ ನಾವೆಲ್ಲರೂ ಸಹಕರಿಸೋಣ ಇನ್ನು ಒಳ್ಳೊಳ್ಳೆಯ ಕಾರ್ಯಕ್ರಮ ಮೂಡಿ ಬರಲಿ ಎಂದರು.
ಮುಖ್ಯ ಅತಿಥಿಗಳಾಗಿ
ಹಿರಿಯ ಮುತ್ಸದ್ದಿ ಬಿ. ಭುಜಬಲಿ ಧರ್ಮಸ್ಥಳ, ಅಳದಂಗಡಿ ಸರಕಾರಿ ಪದವಿಪೂರ್ವ ವಿದ್ಯಾಲಯದ ಕಾರ್ಯಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಬೈಲ್,ಅಳದಂಗಡಿ ಸರಕಾರಿ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕರಾದ ಸದಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದರು.
ಆಮಂತ್ರಣ ರಾಜ್ಯ ನಿರ್ದೇಶಕಿ ಉಮಾ ಸುನಿಲ್ ಹಾಸನ ಮಾತನಾಡಿ ಆಮಂತ್ರಣ ಎಂಬುದು ದೊಡ್ಡ ಸಾಗರ ಇದ್ದಂತೆ ಪ್ರತಿ ಕ್ಷಣದಲ್ಲಿ ಏನೇನೂ ಹೊಸ ವಿಚಾರಗಳಿಗೆ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಟ್ಟು ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದೆ. ಇದರೊಂದಿಗೆ ಸೌಮ್ಯ ತಿಲಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮುನ್ನಡೆಸುವ ಉಯ್ಯಾಲೆ ತಂಡದ ಭಾಗವಾಗಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಕೂಡ ಜೊತೆಯಾಗಲಿದೆ ಎಂದು ಶುಭ ಹಾರೈಸಿದರು.
ತುಳು ಸಿಂಗಾರ :
ಆಮಂತ್ರಣ ಸೇವಾ ಪ್ರತಿಷ್ಟಾನ ವತಿಯಿಂದ ನಡೆದ ತುಳುಸಿಂಗಾರ ಕಾರ್ಯಕ್ರಮ ಅಂಗವಾಗಿ ಚೆನ್ನೆಮಣೆ ಸ್ಪರ್ಧೆ, ಶಾಲಾ ಮಕ್ಕಳಿಗೆ ತುಳುನಾಡ್ ಸಂಸ್ಕೃತಿ ಬಗ್ಗೆ 4 ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ, ಗ್ರಾಮೀಣ ಮಟ್ಟದ ಆಹ್ವಾನಿತ ಕಬಡ್ಡಿ ಪಂದ್ಯಾಟ ನಡೆಸಲಾಯಿತು.
ಸಮಾರಂಭದಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಆಶಾ ಅಡೂರ್, ಭಾರತಿ ಪರ್ಕಳ, ವಿಂದ್ಯಾ ಎಸ್ ರೈ, ಅಮಿತ ಶಮಂತ್ ಚಿಕ್ಕಮಂಗಳೂರು, ಮಂಜುಳಾ ಮುರಳೀ ಕೃಷ್ಣ ಪುತ್ತೂರು, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಚೇತನ್ ಕುಮಾರ್ ಅಮೈ, ಕಸ್ತೂರಿ ಜಯರಾಮ್ ಕಾವೂರು, ಸರೀನ್ ತಾಜ್, ಕುಸುಮ ಬೆಳ್ತಂಗಡಿ, ರೇಣುಕಾ ಸುಧೀರ್, ರಾಕೇಶ್ ಪೊಳಲಿ, ಪ್ರಕಾಶ್ ಆಚಾರ್ಯ, ಪ್ರಸಾದ್ ನಾಯಕ್, ಧನರಾಜ್ ಆಚಾರ್ಯ, ಶ್ವೇತಾ ದಿಲೀಪ್ ನಾರಾವಿ, ಶ್ರದ್ದಾ ಮುಂಡಾಜೆ,
ಧೈಹಿಕ ಶಿಕ್ಷಕ ಶೇಖರ್, ಸದಾಶಿವ, ಕಲಾ ಶಿಕ್ಷಕ ಕೆಂಚ ವೀರಪ್ಪ, ರವಿ ಪೂಜಾರಿ ಕದಿರಾಜ, ಪುಷ್ಪವತಿ ನಾವರ, ಸಮಿತ ಶಶಿಕಿರಣ್ ಶೆಟ್ಟಿ ಕಡಬ, ಹರೀಶ್ ವೈ ಚಂದ್ರಮ, ಶಿಕ್ಷೆಕರಾದ ಸರ್ವಾಣಿ, ಶಶಿಕಲಾ, ರಾಜೇಶ್ವರಿ
ಮುಂತಾದವರು ಉಪಸ್ಥಿತರಿದ್ದರು.
ಆಮಂತ್ರಣ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ವಿಜಯಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಉಯ್ಯಾಲೆ ಕಾರ್ಯದರ್ಶಿ ಅಸ್ಮಿತ ಸುಧೀರ್ ಪಾಡಿಪಿಲ್ಯ ಸ್ವಾಗತಿಸಿದರು.
ಟ್ರಷ್ಟಿಗಳಾದ ಅರುಣ್ ಅರುವ, ಸದಾನಂದ ಬಿ ಕುದ್ಯಾಡಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.
ನಾವರ ಯೋಗಕ್ಷೇಮದ ನಿತ್ಯಾನಂದ ಧನ್ಯವಾದ ಸಲ್ಲಿಸಿದರು.























































