ಕಾರ್ಯದರ್ಶಿಯಾಗಿ ಸವಿತಾ ಹೆಗ್ಡೆ

ಕಾರ್ಕಳ: 2026-27ನೇ ಸಾಲಿನ ರೋಟರಿ ಆನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 29ರಂದು ಕಾರ್ಕಳದ ರೋಟರಿ ಬಾಲ ಭವನದಲ್ಲಿ ನಡೆದಿದ್ದು ಅಧ್ಯಕ್ಷೆಯಾಗಿ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯಾಗಿ ವಕೀಲೆ ಸವಿತಾ ಹೆಗ್ಡೆ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಯಾಗಿ ಅನಿತಾ ಡಿ’ಸಿಲ್ವಾ, ಕೋಶಾಧಿಕಾರಿಯಾಗಿ ಟೆಲ್ಮ ಪಿಂಟೊ, ಜತೆ ಕೋಶಾಧಿಕಾರಿಯಾಗಿ ಸಹನ ಭಟ್ ಅಧಿಕಾರ ಸ್ವೀಕರಿಸಿದರು. ಆನ್ಸ್ ಕ್ಲಬ್ ನ ಚೇರ್ಮನ್ ಆಗಿ ಗೀತಾ ಕಾಮತ್, ಉಪಾಧ್ಯಕ್ಷೆಯಾಗಿ ಉಷಾ ಪ್ರಕಾಶ್ ಆಚಾರ್ಯ ಆಯ್ಕೆಯಾದರು. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶಾಮಲಾ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ರೋಟರಿ ಅಧ್ಯಕ್ಷ ವಿಜೇಂದ್ರ ಕುಮಾರ್ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿದರು.























































