
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಗಣಿತನಗರದಲ್ಲಿ 2026-27ನೇ ಸಾಲಿನ ಇಂಟಾರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ವಿಜೇಂದ್ರ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಪದಪ್ರದಾನ ಮಾಡಿ ಮಾತನಾಡಿದ ಇವರು ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ನಾಯಕರು. ಆದ್ದರಿಂದ ವಿದ್ಯಾರ್ಥಿಗಳಾದ ತಾವು ಕಲಿಕೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಗುರು ಹಿರಿಯರಿಗೆ ಗೌರವ ಕೊಟ್ಟು, ಕಿರಿಯರಿಗೆ ಪ್ರೀತಿ ಕೊಟ್ಟು ಉತ್ತಮ ಪ್ರಜೆಯಾಗಿ ಬಾಳುವಂತಾಗಬೇಕೆಂದು ಇಂಟರಾಕ್ಟ್ ಕ್ಲಬ್‌ನ ಚೇರ್ಮನ್ ಶೇಖರ್ ಹೆಚ್. ಹೇಳಿದರು.
ಇಂಟರಾಕ್ಟ ಕ್ಲಬ್ ನ ನೂತನ ಸದಸ್ಯರಿಗೆ ಕಾರ್ಕಳ ರೋಟರಿ ಕ್ಲಬ್ ನ ಕಾರ್ಯದರ್ಶಿಯಾದ ಉದಯ ಕಡಂಬ ಶುಭಾಶಯ ಕೋರಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಧಿಕಾರಿಯಾಗಿರುವ ಜ್ಯೋತಿ ಪದ್ಮನಾಭ ಭಂಡಿಯವರು ಸಮಾಜದಿಂದ ನಮಗೇನು ಸಿಗುತ್ತದೆ ಎಂಬುದು ಮುಖ್ಯವಲ್ಲ.
ಸಮಾಜಕ್ಕಾಗಿ ನಾವೇನು ಕೊಡುತ್ತೇವೆ ಎಂಬುದು ಅತೀ ಮುಖ್ಯ ಎಂದು ಹೇಳಿದ ಅವರು ಇಂಟಾರಾಕ್ಟ್ ಕ್ಲಬ್ ನ ಉದ್ದೇಶ ಮತ್ತು ಗುರಿಯನ್ನು ತಿಳಿಸಿದರು.
2026-27ನೇ ಸಾಲಿನ ಇಂಟಾರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಸಾನ್ವಿ ಎಸ್. ಕಾರ್ಯದರ್ಶಿಯಾಗಿ ಸಂಸ್ಕೃತಿ ಆಯ್ಕೆಯಾದರು. ವೇದಿಕೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಸಂಯೋಜಕಿ ಪವಿತ್ರ ನಾಯ್ಕ ಕೆ, ರೋಟರಿ ಕ್ಲಬ್ ಸದಸ್ಯರಾದ ಜೆರಾಲ್ಡ್ ಕುಟಿನ್ಹೋ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅವನಿ ಕುಡ್ವ ಪ್ರಾರ್ಥಿಸಿದರು. ಇಂಟರಾಕ್ಟ್ ಕ್ಲಬ್ ನ ಸಂಯೋಜಕಿ ಪವಿತ್ರ
ನಾಯ್ಕ ಕೆ ಸ್ವಾಗತಿಸಿ, ಸಹ ಶಿಕ್ಷಕಿಯರಾದ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿ, ಕುಮಾರಿ ವಿದ್ಯಾ ಧನ್ಯವಾದವಿತ್ತರು.























































