ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ, ನೋಟ್ ಬುಕ್ ವಿತರಣೆ

ಕಾರ್ಕಳ ತಾಲೂಕು, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಹಾಸಭೆಯು ಜುಲೈ 12ರಂದು ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಜರಗಿತು.
ಮುಖ್ಯ ಅಬ್ಯಾಗತರಾಗಿ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ್ ಪಿ ರವಿ ಆಚಾರ್ಯ ಪೆರ್ವಾಜೆ ರವರು ಮಾತನಾಡಿ ಚಿನ್ನ ಬೆಳ್ಳಿ ಸಂಘವು ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆಯನ್ನು ಸೂಚಿಸಿದರು
ಸಭಾಧ್ಯಕ್ಷತೆಯನ್ನು ವಹಿಸಿದ ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ ರಮೇಶ ಆಚಾರ್ಯರು ಮಾತನಾಡಿ ಯಾವುದೇ ಸಂಘ ಸಂಸ್ಥೆಗಳು ಉತ್ತಮ ಕೆಲಸ ಮಾಡಬೇಕಾದರೆ ಸದಸ್ಯರಿಂದ ಸಲಹೆ ಮಾತ್ರವಲ್ಲ ಸಹಕಾರದ ಅವಶ್ಯವಿದೆ ತಾವೆಲ್ಲರೂ ಸಂಘದ ಆರೋಗ್ಯ ನಿಧಿ ಮತ್ತು ಶೈಕ್ಷಣಿಕ ನಿಧಿಗೆ ಕಲ್ಯಾಣ ನಿಧಿಯನ್ನು ಪಾವತಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

*ಗೌರವ ಸನ್ಮಾನ *
ಚಿನ್ನಾಭರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಾಗೂ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೆಸರ್ ಆಗಿ ಆಯ್ಕೆಯಾಗಿರುವ ಪಿ ರವಿ ಆಚಾರ್ಯ ಪೆರ್ವಾಜೆ,ಮತ್ತು ಸ್ವರ್ಣಭರಣ ತಯಾರಕರಾದ ಸುರೇಶ್ ಆಚಾರ್ಯ p h ಹವಾಲ್ದಾರ್ ಬೆಟ್ಟು, ಹಾಗೂ ಎಸ್ ಎಸ್ ಎಲ್ ಸಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿನಿ ತ್ರಿಷಾ ಆಚಾರ್ಯ ಬೆಳ್ಮಣ್ಣ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 8 9 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 4 5 6 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ಬುಕ್ಕು ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಮಹಾಸಭೆಯ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅತಿಥಿಗಳಾಗಿ ಉಪಸ್ಥಿತರಿದ್ದ ವಕೀಲರಾದ ಶ್ರೀಮತಿ ಪ್ರೇಮ ವಿ ಆಚಾರ್ಯ ಕಾರ್ಕಳ ಇವರು ಕಾನೂನು ವಿಭಾಗದಲ್ಲಿ ಉತ್ತಮ ಮಾಹಿತಿಯನ್ನು ನೀಡಿದರು ವೇದಿಕೆಯಲ್ಲಿ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ ಮಾರಾಳಿ ಮತ್ತು ಕಾಳಿಕಾಂಬ ದೇವಸ್ಥಾನದ ನಿಕಟ ಪೂರ್ವ ಆಡಳಿತ ಮೊಕ್ತೆಸರ್ ರಾಮಚಂದ್ರ ಆಚಾರ್ಯ ಅತ್ತೂರು ಹಾಗೂ ಶ್ರೀ ಕಾಳಿಕಾಂಬ ದೇವಸ್ಥಾನದ 2 ನೇ ಮೊಕ್ತೆಸರ್ ಸುರೇಶ ಆಚಾರ್ಯ ನಿಟ್ಟೆ 3ನೇ ಮೊಕ್ತೆಸರ್ ಪಿ ವಸಂತ ಆಚಾರ್ಯ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ.
ನಂತರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರಾಗಿ ಎಂ ರಮೇಶ್, ಆಚಾರ್ಯ ಉಪಾಧ್ಯಕ್ಷರಾಗಿ ವೈ ಟಿ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿಯಾಗಿ k ಸಂತೋಷ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ದಿವಾಕರಾಚಾರ್ಯ ನಿಟ್ಟೆ, ಕೋಶಾಧಿಕಾರಿ ಪ್ರಕಾಶ್ ಆಚಾರ್ಯ ಮರತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಆಚಾರ್ಯ ಅಂಡಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅರುಣಾಚಾರ್ಯ ಸಾಲ್ಮರ,
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಶ್ರೀನಿವಾಸ ಆಚಾರ್ಯ ರೇಂ ಜಾಳ, ಕೆ ಸತೀಶ್ ಆಚಾರ್ಯ, ಗಿರೀಶ್ ಆಚಾರ್ಯ ಬೈಲೂರು , ಮೌನೇಶ್ ಕಾರ್ಕಳ, ವಿಶ್ವನಾಥ್ ಆಚಾರ್ಯ ಕಾರ್ಕಳ , ನಿಖಿಲ್ ಕಾರ್ಕಳ , ಪ್ರವೀಣ್ ಆಚಾರ್ಯ, ಜಯಂತ್ ಪೆರ್ವಾಜೆ, ರಮೇಶ್ ಆಚಾರ್ಯ ಬಂಗ್ಲೆಗುಡ್ಡೆ, ವಿನೋದ್ ಆಚಾರ್ಯ, ಪುರಂದರ್ ಮಾರ್ನಾಡ್, ಸಂತೋಷ್ ಅತ್ತೂರು ಆಯ್ಕೆಯಾದರು
ಕಾರ್ಯಕ್ರಮದಲ್ಲಿ m ರಮೇಶ್ ಆಚಾರ್ಯ ಸ್ವಾಗತಿಸಿ ಕೆ ಸಂತೋಷ ಆಚಾರ್ಯ ನಿರೂಪಿಸಿದರು ಅಶೋಕಾಚಾರ್ಯ ಅಂಡಾರ್ ವಂದಿಸಿದರು.














































