
ಬಜಗೋಳಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಡ್ರಾಲುವಿನ ವಿದ್ಯಾರ್ಥಿಗಳಿಗೆ ಜಾಲಿ ಬಾಯ್ಸ್ ಬಜಗೋಳಿ ತಂಡದ ವತಿಯಿಂದ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಸುನಿಲ್ ಬುನ್ನಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಡಾರು ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷೆ ಶೃತಿ ಡಿ. ಅಧಿಕಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ವಿಜಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಭಾವತಿ, ರಾಜೇಂದ್ರ ಜೈನ್, ದಿವಾಕರ್ ಸೇರ್ವೆಗಾರ್, ಚಂದ್ರಯ್ಯ ಆಚಾರ್ಯ, ರಾಧಾಕೃಷ್ಣ ಪ್ರಭು ಹಾಗೂ ಜಾಲಿ ಬಾಯ್ಸ್ ಬಜಗೋಳಿ ತಂಡದ ಸದಸ್ಯರಾದ ನವೀನ್ ಕುಮಾರ್ ಮುಡ್ರಾಲು, ಪ್ರಶಾಂತ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಸುದರ್ಶನ್ ಡಿ. ರಾವ್, ಪ್ರಶಾಂತ್ ಕೋಟ್ಯಾನ್, ರವೀಂದ್ರ ಆಚಾರ್ಯ, ಪ್ರಮೋದ್ ಜೈನ್, ಅಭಿಲಾಷ್ ಜೈನ್ ಮತ್ತು ರಜತ್ ರಾಮ್ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳು ಮತ್ತು ಅಗತ್ಯ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಾಲಿ ಬಾಯ್ಸ್ ಬಜಗೋಳಿ ತಂಡ ಕೈಗೊಂಡಿರುವ ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.











































