1500ಕ್ಕೂ,ಹೆಚ್ಚು ಉದ್ಯೋಗಾರ್ಥಿಗಳು ಭಾಗಿ,
ಬೆಳಗ್ಗಿನ ಮೊದಲ ಹಂತದಲ್ಲೇ (2 ಗಂಟೆಯಲ್ಲಿ), ನೂರಕ್ಕೂ ಅಧಿಕ ಮಂದಿಗೆ “ಆಫರ್ ಲೆಟರ್”

ಕಾರ್ಕಳ : ಮಾಜಿ ಸಚಿವ, ಕಾರ್ಕಳದ ಶಾಸಕರಾದ ವಿ. ಸುನಿಲ್ ಕುಮಾರ್ ನೇತೃತ್ವದ ಕಾರ್ಕಳದ ವಿಕಾಸ ಸೇವಾ ಸಂಸ್ಥೆ ಉದ್ಯೋಗ ಸೇತು ಕಾರ್ಯಕ್ರಮ ಆಯೋಜನೆಗೊಂಡಿದ್ದು, ತಾಲೂಕಿನಾದ್ಯಂತ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.

ಸುಮಾರು 1500 ಸಾವಿರಕ್ಕೂ ಅಧಿಕ ಉದ್ಯೋಗಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸುಮಾರು ಇಪ್ಪತ್ತೈದಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಂಡಿದೆ.
ಬೆಳಗ್ಗೆ ಶಾಸಕ ಸುನಿಲ್ ಕುಮಾರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ್ದು, ಮೊದಲ ಹಂತದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗಳ ಮೊದಲ ಎರಡುಗಂಟೆಯ ಒಳಗೆ ಆಫರ್ ಲೆಟರ್ ನೀಡಿದ್ದು, ಉದ್ಯೋಗಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಅನೇಕರನ್ನು ಶಾರ್ಟ್ ಲೀಸ್ಟ್ ಮಾಡಿದ್ದು, ತಾಲೂಕಿನಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.












































