25.4 C
Udupi
Tuesday, June 30, 2026
spot_img
spot_img
HomeBlogಬೆನ್ನು ಮೂಳೆ ಗಾಯಗೊಂಡ ರಾಕೇಶ್ ಚಿಕಿತ್ಸೆಗೆ ನವಚೇತನ ಸೇವಾ ಬಳಗದಿಂದ ₹15 ಸಾವಿರ ನೆರವು

ಬೆನ್ನು ಮೂಳೆ ಗಾಯಗೊಂಡ ರಾಕೇಶ್ ಚಿಕಿತ್ಸೆಗೆ ನವಚೇತನ ಸೇವಾ ಬಳಗದಿಂದ ₹15 ಸಾವಿರ ನೆರವು

ನವಚೇತನ ಸೇವಾ ಬಳಗ® ತೋಡಾರು ತನ್ನ 194ನೇ ಸೇವಾ ಪಯಣದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಕೇದಗೆ ಕೋಡಿಮನೆ ನಿವಾಸಿ ರಾಕೇಶ್ ಅವರ ಚಿಕಿತ್ಸೆಗೆ ₹15,000 ಆರ್ಥಿಕ ನೆರವು ನೀಡಿತು.

ರಾಕೇಶ್ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಕೆಲವು ಸಮಯದ ಹಿಂದೆ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಕೆಲಸಕ್ಕೆ ತೆರಳಲು ಸಾಧ್ಯವಾಗದೆ, ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಚಿಕಿತ್ಸೆಯ ವೆಚ್ಚ ಹಾಗೂ ಕುಟುಂಬದ ನಿರ್ವಹಣೆ ಆರ್ಥಿಕವಾಗಿ ಭಾರವಾಗಿರುವ ಹಿನ್ನೆಲೆಯಲ್ಲಿ ನವಚೇತನ ಸೇವಾ ಬಳಗ ನೆರವಿನ ಹಸ್ತ ಚಾಚಿದೆ.ಸಂಸ್ಥೆಯ ವತಿಯಿಂದ ₹15,000 ಮೊತ್ತದ ಚೆಕ್ ಅನ್ನು ರಾಕೇಶ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನವಚೇತನ ಸೇವಾ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಇಲ್ಲಿಯವರೆಗೆ ನವಚೇತನ ಸೇವಾ ಬಳಗವು 194 ಸೇವಾ ಪಯಣಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಒಟ್ಟು ₹55,99,480 ಮೊತ್ತದ ಮಾನವೀಯ ನೆರವನ್ನು ವಿವಿಧ ಅಗತ್ಯವಿರುವ ಕುಟುಂಬಗಳಿಗೆ ವಿತರಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page