26.2 C
Udupi
Monday, June 29, 2026
spot_img
spot_img
HomeBlogಜೂ.30 ಮಂಗಳವಾರ, ಕಾರ್ಕಳದಲ್ಲಿ ವಿದ್ಯುತ್ ವ್ಯತ್ಯಯ

ಜೂ.30 ಮಂಗಳವಾರ, ಕಾರ್ಕಳದಲ್ಲಿ ವಿದ್ಯುತ್ ವ್ಯತ್ಯಯ

ಕಾರ್ಕಳ, ಜೂನ್ 30: ಮೆಸ್ಕಾಂ ಕಾರ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಜೂನ್ 30 (ಮಂಗಳವಾರ) ಬೆಳಗ್ಗೆ 9.00ರಿಂದ ಸಂಜೆ 5.00ರವರೆಗೆ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಕಾರ್ಕಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ:30.06.2026 ರಂದು 33ಕೆವಿ ಸ್ಟೇಶನ್ ಗೆ ಸಂಬಂಧಿಸಿದ 11ಕೆವಿ ಫೀಡರ್ ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಅಂದು 33/11 ಕೆವಿ ಬಜಗೋಳಿ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕರ್ಮಾರ್ ಕಟ್ಟೆ, ಚೌಕಿ, ನೆಲ್ಲಿಕಾರು, ಹೊಸ್ಮಾರು ಎಕ್ಸ್ ಪ್ರೆಸ್, ಮಲ್ಲಾರು, ಬಜಗೋಳಿ ಟೌನ್, ಮತ್ತು ಕೆರ್ವಾಶೆ ಫೀಡರ್ ಗಳಲ್ಲಿ ಬೆಳಿಗ್ಗೆ 09.00 ಘಂಟೆಯಿಂದ ಅಪರಾಹ್ನ 5.00 ಘಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದ್ದರಿಂದ ಕಾರ್ಕಳ ತಾಲೂಕಿನ ಬಜಗೋಳಿ, ಕೆರ್ವಾಶೆ, ಮುಡಾಲು, ಕಡಾರಿ, ಮುಲ್ಲೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಚೆಂಡೆ ಬಸದಿ, ಪುಚ್ಚಬೆಟ್ಟು, ಜ್ಯೋತಿನಗರ, ಪೇರಲ್ಕೆ, ಪೆರ್ನೋಡಿ, ಹೊಸ್ಮಾರು, ಈದು, ನಲ್ಲೂರು, ನೆಲ್ಲಿಗುಡ್ಡೆ, ನೂರಾಳ್ ಬೆಟ್ಟು ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಗ್ರಾಹಕರು ಇದನ್ನು ಗಮನಿಸಿ ಮ.ವಿ.ಸ.ಕಂ.ನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಗ್ರಾಹಕರು ಮೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page