
ಕಾರ್ಕಳ: ಮೆಸ್ಕಾಂ ವತಿಯಿಂದ ಜೂನ್ 23ರಂದು 33 ಕೆವಿ ಸ್ಟೇಷನ್‌ಗೆ ಸಂಬಂಧಿಸಿದ ಸ್ಟ್ರಕ್ಚರ್ ಚೇಂಜ್ ಹಾಗೂ ವಿವಿಧ 11 ಕೆವಿ ಫೀಡರ್‌ಗಳ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಕಾರ್ಕಳ ಐಬಿ, ಕಾರ್ಕಳ ಎಕ್ಸ್ ಪ್ರೆಸ್, ಮಿಯ್ಯಾರು ಹಾಗೂ ಇರ್ವತ್ತೂರು ಫೀಡರ್‌ಗಳು, 110/11 ಕೆವಿ ಬೆಳ್ಳಣ್ ವಿದ್ಯುತ್ ಉಪಕೇಂದ್ರದ ಮುಂಡೂರು ಫೀಡರ್ ಮತ್ತು 110/11 ಕೆವಿ ಕಾರ್ಕಳ ವಿದ್ಯುತ್ ಕೇಂದ್ರದಿಂದ ಕಾರ್ಯನಿರ್ವಹಿಸುವ ಜಾರ್ಕಳ, ಹಿರ್ಗಾನ, ನೆಲ್ಲಿಕಟ್ಟೆ, ಕೆಎಚ್ ಬಿ, ನಕ್ರೆ, ಪದವು ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿದೆ. ಇದೇ ವೇಳೆ 33/11 ಕೆವಿ ಬಜಗೋಳಿ ವಿದ್ಯುತ್ ಕೇಂದ್ರದ ಕರ್ಮಾರ್ ಕಟ್ಟೆ, ಚೌಕಿ ನೆಲ್ಲಿಕಾರು, ಹೊಸ್ಮಾರು ಎಕ್ಸ್ ಪ್ರೆಸ್, ಮಲ್ಲಾರು, ಬಜಗೋಳಿ ಟೌನ್ ಹಾಗೂ ಕೆರ್ವಾಶೆ ಫೀಡರ್‌ಗಳಲ್ಲಿಯೂ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯದಿಂದ ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು, ಬೋರ್ಕಟ್ಟೆ, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಮುಂಡ್ಕೂರು, ಮುಲ್ಲಡ್ಕ ಕೊಡಿಮಾರ್, ನಾನಿಲ್ ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಕುಂಟಲ್ ಪಾಡಿ, ಕೋರ್ಟ್ ರೋಡ್, ಜೋಗಲ್ ಬೆಟ್ಟು, ಆನೆಕರೆ, ಕಾಳಿಕಾಂಬ ಪ್ರದೇಶಗಳು, ಕುಕ್ಕುಂದೂರು, ಅಯ್ಯಪ್ಪನಗರ, ಮಂಗಳಕಲ್ಲು, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ಬೈಲೂರು, ನೀರೆ, ಕಾಡೂರು, ಹಿರ್ಗಾನ, ಕಾನಂಗಿ ರಸ್ತೆ, ಕುಂದೇಶ್ವರ, ಚಿಕ್ಕಲ್ ಬೆಟ್ಟು, ಮಂಗಿಲಾರು, ನೆಲ್ಲಿಕಟ್ಟೆ, ಕಾಂತರಗೋಳಿ, ಎರ್ಲಪಾಡಿ, ಗೋವಿಂದೂರು, ಕೆಎಚ್ ಬಿ ಕಾಲೋನಿ, ಜೋಡುರಸ್ತೆ, ಗುಂಡ್ಯಡ್ಕ, ಕುಂಟಾಡಿ, ಪೊಸನೊಟ್ಟು, ನಕ್ರೆ, ಪರಪು, ಬೋರ್ಗಲ್ ಗುಡ್ಡೆ, ಪದವು, ಪಳ್ಳಿ ಆನಂದಿಮೈದಾನ, ಬಜಗೋಳಿ, ಕೆರ್ವಾಶೆ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಚೆಂಡೆ ಬಸದಿ, ಪುಚ್ಚಬೆಟ್ಟು, ಜ್ಯೋತಿನಗರ, ಪೇರಿ, ಪೆನೋರ್ಡಿ, ಹೊಸ್ಮಾರು, ಈದು, ನೆಲ್ಲೂರು, ನೆಲ್ಲಿಗುಡ್ಡೆ, ನೂರಾಳ್ ಬೆಟ್ಟು ಏರಿಯಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಒಳಪಡುವುದಾಗಿ ತಿಳಿಸಲಾಗಿದೆ.
ಈ ಕುರಿತು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.

































