25.6 C
Udupi
Monday, June 8, 2026
spot_img
spot_img
HomeBlogಲಯನ್ಸ್ ಕ್ಲಬ್ ಬೆಳ್ಮಣ್ಣಿನ ಪದಗ್ರಹಣ ಸಮಾರಂಭ

ಲಯನ್ಸ್ ಕ್ಲಬ್ ಬೆಳ್ಮಣ್ಣಿನ ಪದಗ್ರಹಣ ಸಮಾರಂಭ

ಬೆಳ್ಮಣ್, ಜೂನ್ 6: ಲಯನ್ಸ್ ಜಿಲ್ಲೆ 317Cರ ಪ್ರಾಂತ 6, ವಲಯ 2ರ ಲಯನ್ಸ್ ಕ್ಲಬ್ ಬೆಳ್ಮಣ್ಣಿನ 2026-27ನೇ ಸಾಲಿನ ಪದಗ್ರಹಣ ಸಮಾರಂಭವು ಸಿರ್ಸಿಯ JLT ಸಂಯೋಜಕರಾದ ಲಯನ್ ಅಶೋಕ್ ಹೆಗಡೆಯವರ ಪೌರೋಹಿತ್ಯದಲ್ಲಿ ಬೆಳ್ಮಣ್ ಲಯನ್ಸ್ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದಲ್ಲಿ ಲಯನ್ ಬಿ. ಎಚ್. ಶಿವರಾಮ ಆಚಾರ್ಯ ಅಧ್ಯಕ್ಷರಾಗಿ, ಲಯನ್ ಟೀನಾ ಡೇಸಾ ಕಾರ್ಯದರ್ಶಿಯಾಗಿ ಹಾಗೂ ಲಯನ್ ಗ್ರೆಗರಿ ನೊರೊನ್ಹ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಲಿಯೋ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಲಿಯೋ ಅಭಿಲಾಷ್ ಡಿ ಅಲ್ಮೇಡ ಹಾಗೂ ಅವರ ತಂಡ ಪದಗ್ರಹಣ ಗೈದರು.ದಿ. ಕೋಡಿಮಾರ್ ಗೋಪಾಲಕೃಷ್ಣ ತಂತ್ರಿ ಸ್ಮಾರಕ ನಿಧಿ ಹಾಗೂ ಬೆಳ್ಮಣ್ ಸೇವಾ ಟ್ರಸ್ಟ್‌ನ ಸಹಕಾರದೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

2025-26ನೇ ಸಾಲಿನಲ್ಲಿ ಕ್ಲಬ್ಬಿನ ಗೌರವವನ್ನು ಹೆಚ್ಚಿಸಿದ ಲಯನ್ ರಂಜಿತ್ ಕೆ. ಎಸ್., ಲಯನ್ ಸದಾನಂದ ಶೆಟ್ಟಿಗಾರ್ ಹಾಗೂ ಲಯನ್ ಸದಾನಂದ ಭಟ್ ಅವರನ್ನು ಸನ್ಮಾನಿಸಲಾಯಿತು. BAI ಅಧ್ಯಕ್ಷರಾಗದ ಲಯನ್ ವಿ. ಪ್ರಸಾದ್ ಶೆಟ್ಟಿಯವರನ್ನು ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಯಿತು.ಇತ್ತೀಚೆಗೆ ನಿಧನರಾದ ಲಯನ್ ಉದಯ್ ಕುಮಾರ್ ಶೆಟ್ಟಿ ಇನ್ನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೂತನ ಸದಸ್ಯರಾಗಿ ಶ್ರೀಮತಿ ಜ್ಯೋತಿ ಆಚಾರ್ಯ ಹಾಗೂ ಕಿರಣ್ ಕುಮಾರ್ ಸಾಣೂರು ಅವರನ್ನು ಸೇರಿಸಲಾಯಿತು.

ಮಾಜಿ ಜಿಲ್ಲಾ ಗವರ್ನರ್ ಲಯನ್ ಎನ್. ಎಂ. ಹೆಗಡೆ, ಪ್ರಾಂತೀಯ ಅಧ್ಯಕ್ಷ ಲಯನ್ ಥೋಮಸ್ ಲುಕಾಸ್, ವಲಯಾಧ್ಯಕ್ಷ ಲಯನ್ ಡಾ. ಮನೋಜ್ ಕುಮಾರ್ ಶೆಟ್ಟಿ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಬಿ. ಸೀತಾರಾಮ್ ಭಟ್ಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಲಯನ್ ಸಂಧ್ಯಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸ್ಥಾಪನಾ ಸಮಾರಂಭವು ಸುಸೂತ್ರವಾಗಿ ನೆರವೇರಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page