ಕಾರ್ಕಳ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ

ಒಂದು ಶಾಲೆಯಲ್ಲಿ ಮಕ್ಕಳು- ಶಿಕ್ಷಕರು ಇಷ್ಟೊಂದು ಯೋಜನಾ ಬದ್ಧವಾಗಿ, ಭಾವಪೂರ್ಣವಾಗಿ, ಅರ್ಥಗರ್ಭಿತವಾಗಿ ಶಿಸ್ತಿನಿಂದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದ್ದನ್ನು ನೋಡಿದ್ದು ಇದೇ ಪ್ರಥಮ. ಪ್ರಾಯಶ: ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಶಾಲೆಗಳು ನಡೆಸಿದ್ದಲ್ಲಿ ಅನೇಕ ದೇಶಪ್ರೇಮಿಗಳು ಸೈನಿಕರು ತಯಾರಾಗಲಿದ್ದಾರೆ. ಒಬ್ಬ ಕಾರ್ಗಿಲ್ ಯುದ್ಧದ ಯೋಧನಾಗಿ ಆ ದಿನಗಳಲ್ಲಿ ಅನುಭವಿಸಿದ ಕಷ್ಟ, ತೊಂದರೆ ಇವತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕ್ರತಾರ್ದವಾಯಿತು. ಒಬ್ಬ ಸೈನಿಕನಾಗಿ ಕಾರ್ಗಿಲ್ ಯುದ್ಧ, ಸಿಯಾಚಿನ್ ಗ್ಲಾಸಿಯರ್ ನಂತ ಕಠಿಣ ದುರ್ಗಮ ಪ್ರದೇಶಗಳಲ್ಲಿ ಹೋರಾಡಿದ್ದು, ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್, ಆಪರೇಷನ್ ಪರಾಕ್ರಮ್ ನಂತ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಕ್ಕೆ ಇಂದು ಹೆಮ್ಮೆ ಯೆನಿಸುತ್ತಿದೆ ಎಂದರು.
ಮುಖ್ಯ ಅತಿಥಿ ಜೇಸಿಐ ಪರ್ಕಳದ ಅಧ್ಯಕ್ಷ ಜೇಸಿ ಭರತ್ ಕುಲಾಲ್ ಮಾತನಾಡಿ 1999 ರಲ್ಲಿ ನಾನು ಎರಡನೇ ತರಗತಿ ಓದುತ್ತಿದ್ದೆ. ಆದರೆ ಯುದ್ಧ ನಡೆಯುತ್ತಿದ್ದರೂ ಒಂದೇ ಒಂದು ದಿನ ಅದರ ಅನುಭವ ನಮಗಾಗಲಿಲ್ಲ. ಇದಕ್ಕೆ ಕಾರಣ ತಮ್ಮ ಜೀವ ಬಲಿ ಕೊಟ್ಟು ಮತ್ತು ಜೀವದ ಹಂಗು ತೊರೆದು ಹೋರಾಡಿದ ಸೈನಿಕರು. ಹಾಗಾಗಿ ಕ್ಷುಲ್ಲಕ ಕಾರಣಗಳಿಗೆ ಹೋರಾಟಗಳನ್ನು ಮಾಡಿ ದೇಶದ ಮಾನ ಕಳೆಯದೆ ಪ್ರೌಢ ಪ್ರಜೆಗಳಾಗಿ ಬಾಳೋಣ. ಅದೇ ದೇಶಕ್ಕೆ ಕೊಡುವ ದೊಡ್ಡ ಕಾಣಿಕೆ ಎಂದರು.
ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ಪದ್ಮ ಪ್ರಸಾದ್ ಪ್ರಪ್ರಥಮವಾಗಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿದ್ದು 1999ರಲ್ಲಿ ಜೇಸಿಐ ಕಾರ್ಕಳ. ಅದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ನುಡಿದರು.
ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ, ಜೇಸಿಐ ಕಾರ್ಕಳದ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರನ್ ಪಿ ನಂಬೂಧರಿ, ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಮಮತಾ ಸುವರ್ಣ ಉಪಸ್ಥಿತರಿದ್ದರು.
ಕುಮಾರಿ ಮಾನ್ವಿ ದೇವಾಡಿಗ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಪ್ರೇಕ್ಷಾ ಶೆಟ್ಟಿ ಸ್ವಾಗತಿಸಿದರೆ, ಶ್ರೀಮತಿ ಪ್ರತಿಮಾ ಪ್ರಾಸ್ತಾವಿಕವಾಗಿ ನುಡಿದರು, ಶಿಕ್ಷಕಿ ಶ್ರೀಮತಿ ಪವಿತ್ರಾ ಪ್ರಶಸ್ತಿ ಪತ್ರ ವಾಚಿಸಿದರು. ಕುಮಾರಿ ಧೃತಿ ಮರಾಠೆ ವಂದಿಸಿದರು.



















































