“ಮಗಳೇ ಇಲ್ಲದ ಮೇಲೆ, ಯಾರನ್ನು ದೂರಲಿ”… ತಂದೆ ಕಣ್ಣೀರು

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆ, ರದ್ದಾದ ಬೆನ್ನಲ್ಲೇ, ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿ ನಿವಾಸಿ ರಾಜಶೇಖರ್ ಅವರ ಪುತ್ರಿ ಭಾಗ್ಯಶ್ರೀ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು 92 ಅಂಕಗಳೊಂದಿಗೆ ತೇರ್ಗಡೆ ಗೊಂಡಿದ್ದಳು. ಮೇ 2ರಂದು ನೀಟ್ ಪರೀಕ್ಷೆ ಬರೆದಿದ್ದು, ಫಲಿತಾಂಶದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಳು ಎಂದು ತಂದೆ ರಾಜಶೇಖರ್ ತಿಳಿಸಿದ್ದಾರೆ.
“ಮಗಳಿಗೆ ನೀಟ್ ಪರೀಕ್ಷೆಯ ಫಲಿತಾಂಶದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು. ಡೆತ್ ನೋಟ್ ಸಿಕ್ಕಿಲ್ಲ. ಮಗಳೇ ಇಲ್ಲದ ಮೇಲೆ ನಾವು ಯಾರ ಮೇಲೂ ದೂರು ನೀಡುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.




























