
ಕನ್ನಡ ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಇಂದು ಬೆಳಗಿನ ಜಾವ ಹೃದಯಘಾತದಿಂದ ನಿಧನರಾಗಿದ್ದಾರೆ.
ನಟ ದಿಲೀಪ್ ರಾಜ್ ಗೆ ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡಿದ್ದು, ಇವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ನಟ ಕೊನೆಯುಸಿರೆಳೆದಿದ್ದಾರೆ. ನಟನ ಸಾವಿನ ಸುದ್ದಿ ಕಿರುತೆರೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ.
1978 ಸೆಪ್ಟೆಂಬರ್ 2 ರಂದು ಬೆಂಗಳೂರಿನಲ್ಲಿ ಜನಿಸಿದ ನಟ ದಿಲೀಪ್ ರಾಜ್ ಮೊದಲ ಬಾರಿಗೆ ಕಿರುತೆರೆಯ “ಕಂಬದ ಮನೆ” ಧಾರಾವಾಹಿಯಲ್ಲಿ ನಟಿಸಿದ್ದರು. ಹಲವು ಸಿನಿಮಾದಲ್ಲೂ ಹೆಸರು ಗಳಿಸಿದ ನಟ 2007 ಪುನೀತ್ ರಾಜಕುಮಾರ್ ನಟನೆಯ “ಮಿಲನ”ಚಿತ್ರದ ಖಳನಾಯಕ ಪಾತ್ರದಲ್ಲಿ ಖ್ಯಾತಿಗಳಿಸಿದ್ದರು. ಇವರೇ ನಿರ್ಮಿಸಿ ನಟಿಸಿದ “ಹಿಟ್ಲರ್ ಕಲ್ಯಾಣ” ಧಾರಾವಾಹಿ ಹೆಚ್ಚಿನ ಹೆಸರು ತಂದು ಕೊಟ್ಟಿತ್ತು.






















