27.9 C
Udupi
Tuesday, May 5, 2026
spot_img
spot_img
HomeBlogದಳಪತಿ ವಿಜಯ್ ಗೆ ರಾಜಕೀಯ ಜಯಭೇರಿ: TVKಗೆ 106 ಸೀಟು

ದಳಪತಿ ವಿಜಯ್ ಗೆ ರಾಜಕೀಯ ಜಯಭೇರಿ: TVKಗೆ 106 ಸೀಟು

‘CM 2026’ ಭವಿಷ್ಯ ನಿಜವಾಯಿತೇ?

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ 106 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆ, ತಮಿಳು ನಟ ದಳಪತಿ ವಿಜಯ್ ಅವರ ರಾಜಕೀಯ ಕನಸು ಇದೀಗ ಸಾಕಾರವಾಗುವ ಹಂತಕ್ಕೆ ಬಂದಿದೆ. ಸರ್ಕಾರ ರಚನೆ ಬಹುತೇಕ ಖಚಿತವಾಗಿದ್ದು ಈ ನಡುವೆ, ಅವರ ಕಾರಿನ ನಂಬರ್ ಪ್ಲೇಟ್ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

2024ರಲ್ಲಿ ಬಿಡುಗಡೆಯಾದ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಚಿತ್ರದ ಸಮಯದಲ್ಲಿ ವಿಜಯ್ ಕಾಣಿಸಿಕೊಂಡ ಕಾರಿನ ನಂಬರ್ TN 07 CM 2026 ಆಗಿತ್ತು. ಅದು ನಿರ್ದೇಶಕ ವೆಂಕಟ್ ಪ್ರಭು ಅವರ ಕಾರು ಎಂದು ಹೇಳಲಾಗಿದ್ದು, ಅಭಿಮಾನದಿಂದ ಈ ಸಂಖ್ಯೆಯನ್ನು ಆಯ್ಕೆ ಮಾಡಲಾಗಿತ್ತು. ಇದೇ ಕಾರು ಚಿತ್ರದ ದೃಶ್ಯದಲ್ಲಿಯೂ ಬಳಸಲಾಗಿತ್ತು.

ಇದೀಗ ‘CM 2026’ ಎಂಬ ನಂಬರ್ ನಿಜವಾಗುವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2026ರ ಚುನಾವಣೆಯಲ್ಲಿ ವಿಜಯ್ ಭರ್ಜರಿ ಗೆಲುವು ಸಾಧಿಸಿದ್ದು, ಅವರು ನಾಯಕತ್ವದತ್ತ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಕೊನೆಯ ಚಿತ್ರ ಎಂದು ಘೋಷಿಸಿರುವ ‘ಜನ ನಾಯಗನ್’ ಬಳಿಕ ಅವರು ಸಂಪೂರ್ಣ ರಾಜಕೀಯಕ್ಕೆ ತೊಡಗಿಕೊಳ್ಳಲಿದ್ದಾರೆ.

ವಿಜಯ್ ಅಭಿನಯದ ಅಂತಿಮ ಚಿತ್ರವನ್ನು ನಿರ್ಮಿಸುತ್ತಿರುವ ಕೆವಿಎನ್ (KVN) ಸಂಸ್ಥೆಗೆ ಇದು ಡಬಲ್ ಖುಷಿಯಾಗಿದೆ. ಒಂದು ಕಡೆ ‘ಕೆಡಿ’ ಸಿನಿಮಾ ಯಶಸ್ಸು ಕಂಡಿದ್ದು, ಮತ್ತೊಂದೆಡೆ ವಿಜಯ್ ಮುಖ್ಯಮಂತ್ರಿಯಾಗಿ ಹೊರಹೊಮ್ಮುತ್ತಿರುವುದು ಸಂಸ್ಥೆಯ ಸಂತಸವನ್ನು ಹೆಚ್ಚಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page