29.3 C
Udupi
Thursday, April 23, 2026
spot_img
spot_img
HomeBlogಹಾಲು ಉತ್ಪಾದಕರ ಸಹಕಾರ ಸಂಘ ರೆಂಜಾಳ :16 ವರ್ಷ ಸೇವೆ ಸಲ್ಲಿಸಿ,ಸೇವಾ ನಿವೃತ್ತಿ ಹೊಂದಿದ ಸಂಘದ...

ಹಾಲು ಉತ್ಪಾದಕರ ಸಹಕಾರ ಸಂಘ ರೆಂಜಾಳ :16 ವರ್ಷ ಸೇವೆ ಸಲ್ಲಿಸಿ,ಸೇವಾ ನಿವೃತ್ತಿ ಹೊಂದಿದ ಸಂಘದ ಕಾರ್ಯದರ್ಶಿ ರಮೇಶ್ ವಿ ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮ

ರೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘ ವತಿಯಿಂದ ರೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ ಹದಿನಾರು ವರ್ಷಗಳಿಂದ ನಿಷ್ಕಳಂಕ ಸೇವೆಯನ್ನು ಮಾಡಿ ಸಂಘದ ಬೆಳವಣಿಗೆಗೆ ಸಹಕರಿಸಿ,ಸೇವಾ ನಿವೃತ್ತಿಯನ್ನು ಹೊಂದುತ್ತಿರುವ ಸಂಘದ ಕಾರ್ಯದರ್ಶಿ
ರಮೇಶ ವಿ. ಶೆಟ್ಟಿಯವರಿಗೆ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಸ್ವಾಗತ ಕಾರ್ಯಕ್ರಮ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಜೈನ್ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ. ಮಹಾವೀರ ಹೆಗ್ಡೆ, ಬ್ರಾಣಬೆಟ್ಟು, ರೆಂಜಾಳ ನೆರವೇರಿಸಿದರು,ಈ ಸಂದರ್ಭದಲ್ಲಿ ರೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಜೋನ್ ಮಸ್ಕರೇನಸ್,ಮುಖ್ಯ ಅತಿಥಿಗಳಾಗಿ ಉದಯ ಎಸ್. ಕೋಟ್ಯಾನ್ ಉಪಾಧ್ಯಕ್ಷರು, ದ.ಕ. ಹಾಲು ಉತ್ಪಾದಕರ ಒಕ್ಕೂಟ,ಶ್ರೀ ಸುಧಾಕರ ಶೆಟ್ಟಿ, ಮುಡಾರು ನಿರ್ದೇಶಕರು, ದ.ಕ. ಹಾಲು ಉತ್ಪಾದಕರ ಒಕ್ಕೂಟ, ಪದ್ಮಕುಮಾರಿ, ಪಂಚಾಯತು ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ರೆಂಜಾಳ,ಸಂಸ್ಕೃತಿ ಸಿಂಚನದ ಸಂಚಾಲಕರಾದ ರಾಜೇಶ್ ರೆಂಜಾಳ,ಬಾಲಕೃಷ್ಣ ಹಿರಿಂಜ, ಯೋಜನಾಧಿಕಾರಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಕಾರ್ಕಳ,ಯಶವಂತ್, ಸಹಾಯಕ ವ್ಯವಸ್ಥಾಪಕರು ದ.ಕ. ಹಾಲು ಉತ್ಪಾದಕರ ಒಕ್ಕೂಟ, ಕುಲಶೇಖರ,ವಿನಯ ಕುಮಾರ್, ಮೇಲ್ವಿಚಾರಕರುದ.ಕ. ಹಾಲು ಉತ್ಪಾದಕರ ಒಕ್ಕೂಟ, ಕುಲಶೇಖರ,ಸುಬ್ರಹ್ಮಣ್ಯ ಭಟ್, ರೆಂಜಾಳ.ಸ್ಥಳದಾನಿಗಳು, ರೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘ,ವಿದ್ಯಾನಂದ ಜೈನ್, ರೆಂಜಾಳ
ಹಿತೈಷಿಗಳು, ರೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘ,ಹಾಗೂ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು

ಕಾರ್ಯಕ್ರಮದ ನಿರೂಪಣೆಯನ್ನು ಮುನಿರಾಜ್ ರೆಂಜಾಳ ಹಾಗೂ ಧನ್ಯವಾದವನ್ನು ಸಂಘದ ನಿರ್ದೇಶಕರಾದ ಜಯರಾಮ್ ಶೆಟ್ಟಿ ನೆರವೇರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page