
ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಪ್ರಣೀತ್ ಕುಮಾರ್ ರವರು ಆಯ್ಕೆಯಾಗಿದ್ದಾರೆ. ಅತ್ಯುತ್ತಮ ವಾಲಿಬಾಲ್ ಆಟಗಾರರಾದ ಇವರು ರಾಷ್ಟ್ರಮಟ್ಟವನ್ನು ಕೂಡ ಪ್ರತಿನಿಧಿಸಿದ್ದಾರೆ. ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆಯ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪಡೆದಿದ್ದಾರೆ. ಆಳ್ವಾಸ್ ಪದವಿ ಕಾಲೇಜಿನಲ್ಲಿ ಮೂರು ವರ್ಷ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಆಗಿ ತರಬೇತಿಯನ್ನು ಪಡೆದಿದ್ದಾರೆ.
ಇವರನ್ನು ಸಂಸ್ಥೆಯ ಅಧ್ಯಕ್ಷರಾದಂತಹ ಜೇಸಿ ಚಿತ್ತರಂಜನ್ ಶೆಟ್ಟಿ, ಕಾರ್ಯದರ್ಶಿ ಜೇಸಿ ಡಾಕ್ಟರ್ ಮುರಳೀಧರ್ ಭಟ್, ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.


































