
ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿ ಗಣಿತ ಶಿಕ್ಷಕ ಡಾl. ಶಂಕರನ್ ಪಿ ನಂಬೂಧರಿ ಯವರು ಅಧಿಕಾರ ಸ್ವೀಕರಿಸಿದ್ದಾರೆ. ಹಿಂದೆ ಡಾl. ಶಂಕರ್ ಅಡ್ಯಂತಾಯ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ನಿಟ್ಟೆ ಇಲ್ಲಿ ಗಣಿತ ಅಧ್ಯಾಪಕರಾಗಿ ,ಮುಂದೆ ಪ್ರಾಂಶುಪಾಲರಾಗಿ ದುಡಿದಿದ್ದರು. ಮುಂದೆ PHD ಪದವಿಯನ್ನು ಪಡೆದು, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು . ಕಳೆದ ಮೂರು ವರ್ಷಗಳಿಂದ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 30 ವರ್ಷಕ್ಕಿಂತಲೂ ಅಧಿಕ ಬೋಧನಾತ್ಮಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಇವರು ಸರಳ, ಮೃದು ಭಾಷೆ, ಕಠಿಣ ದುಡಿಮೆಯ ಬದ್ಧತೆಯುಳ್ಳ ಅವರ ಈ ಗುಣಗಳಿಂದಾಗಿ ಪ್ರಾಂಶುಪಾಲರಾಗಿ ಆಯ್ಕೆಯಾಗಿದ್ದಾರೆ.
ಇವರನ್ನು ಸಂಸ್ಥೆಯ ಅಧ್ಯಕ್ಷರಾದಂತಹ ಜೇಸಿ ಚಿತ್ತರಂಜನ್ ಶೆಟ್ಟಿ, ಕಾರ್ಯದರ್ಶಿ ಜೇಸಿ ಡಾಕ್ಟರ್ ಮುರಳೀಧರ್ ಭಟ್, ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.













