
ಮಂಗಳೂರು: ಮಂಗಳೂರಿನ ಕ್ಯಾಸಾಗ್ರಾಂಡ್ ಅಪಾರ್ಟ್ಮೆಂಟ್ನಲ್ಲಿ 12ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಸ್ನೇಹಿತರನ್ನು ಮೀಟ್ ಮಾಡಲು ಪರಿಚಯಸ್ಥರ ಫ್ಲಾಟ್ಗೆ ಬಂದಿದ್ದ ವೇಳೆ ಅಲ್ಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯ ಹೆಸರು ಮತ್ತು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.






















































