30.1 C
Udupi
Thursday, March 26, 2026
spot_img
spot_img
HomeBlogಅಪ್ರಾಪ್ತರಿಗೆ ಮದ್ಯ ತಡೆಗೆ ಕಟ್ಟುನಿಟ್ಟಿನ ನಿಯಮ: ವಯಸ್ಸು ಪರಿಶೀಲನೆ ಕಡ್ಡಾಯ ಎಂದ ಹೈಕೋರ್ಟ್

ಅಪ್ರಾಪ್ತರಿಗೆ ಮದ್ಯ ತಡೆಗೆ ಕಟ್ಟುನಿಟ್ಟಿನ ನಿಯಮ: ವಯಸ್ಸು ಪರಿಶೀಲನೆ ಕಡ್ಡಾಯ ಎಂದ ಹೈಕೋರ್ಟ್

ಬೆಂಗಳೂರು: ಬ್ರೇವರಿಸ್ ಮತ್ತು ಮದ್ಯ ಮಾರಾಟ ಕೇಂದ್ರಗಳು ಗ್ರಾಹಕರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಆಧಾರ್ ಅಥವಾ ಇತರೆ ಮಾನ್ಯ ಗುರುತಿನ ಚೀಟಿಗಳ ಮೂಲಕ ವಯಸ್ಸು ದೃಢಪಡಿಸದೆ ಪ್ರವೇಶ ನೀಡಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಪ್ರಾಪ್ತರಿಗೆ ಮದ್ಯ ನೀಡದಂತೆ ಕಠಿಣ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದ ಕೋರ್ಟ್
ಪ್ರಕರಣದ ವಿಚಾರಣೆ ವೇಳೆ, ಮದ್ಯ ಮಾರಾಟ ಕೇಂದ್ರಗಳಲ್ಲಿ ವಯಸ್ಸು ಪರಿಶೀಲನೆ ನಿರ್ಲಕ್ಷ್ಯದಿಂದ ನಡೆಯುತ್ತಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಅಪ್ರಾಪ್ತರಿಗೆ ಮದ್ಯಪಾನ ನಿಷೇಧ ಎಂಬ ಸೂಚನಾ ಫಲಕಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವಂತೆ ಸೂಚನೆ ನೀಡಿದೆ. ಯುವಕರ ಸುರಕ್ಷತೆ ಕೇವಲ ಕಾನೂನುಬದ್ಧ ಜವಾಬ್ದಾರಿಯಲ್ಲ, ಅದು ನೈತಿಕ ಕರ್ತವ್ಯವೂ ಆಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನಗರದ ಲೆಗಸಿ ಬ್ರೇವಿಂಗ್ ಕಂಪನಿಯಲ್ಲಿ 15 ವರ್ಷದ ಬಾಲಕ ಮದ್ಯ ಸೇವಿಸಿ ತನ್ನ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಪಾಲುದಾರ ಚಿಟ್ಟಿಬಾಬು ಸಲ್ಲಿಸಿದ್ದ ಎಫ್‌ಐಆರ್ ರದ್ದುಪಡಿಸುವ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ. ಬಾಲಕ ಮದ್ಯ ಸೇವಿಸಿದ್ದದ್ದು ಸ್ಪಷ್ಟವಾಗಿದ್ದು, ಈ ಘಟನೆಯಲ್ಲಿ ನಿರ್ಲಕ್ಷ್ಯವಿದೆಯೇ ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಬ್ರೇವರೀಸ್‌ಗಳು ಪ್ರವೇಶದ ವೇಳೆ ಕಟ್ಟುನಿಟ್ಟಿನ ವಯಸ್ಸು ಪರಿಶೀಲನಾ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ. ಅಪ್ರಾಪ್ತರು ಸುಲಭವಾಗಿ ಪ್ರವೇಶ ಪಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಂಸ್ಥೆಗಳು ತಮ್ಮ ಮೇಲೆ ಇರುವ ಹೊಣೆಗಾರಿಕೆಯನ್ನು ಜಾಗರೂಕತೆಯಿಂದ ನಿಭಾಯಿಸಬೇಕು ಎಂದು ಎಚ್ಚರಿಕೆ ನೀಡಿದೆ.

ಈ ಪ್ರಕರಣದಲ್ಲಿ ಬಾಲಕ ಮದ್ಯ ಸೇವಿಸಿ ಸಾವನ್ನಪ್ಪಿರುವುದು ಗಂಭೀರ ವಿಷಯವಾಗಿದ್ದು, ಸಂಸ್ಥೆಯ ನಿರ್ಲಕ್ಷ್ಯ ಅಥವಾ ಸುರಕ್ಷತಾ ಕೊರತೆಗಳ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ ಎಂದು ನ್ಯಾಯಪೀಠ ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page