ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗ ರವರಿಗೆ ಅಭಿನಂದನಾ ಕಾರ್ಯಕ್ರಮ

ದೇವಾಡಿಗ ಸುಧಾರಕ ಸಂಘ (ರಿ) ಕಾರ್ಕಳ ಹಾಗೂ ದೇವಾಡಿಗ ಯುವ ವೇದಿಕೆಯ ಸಹಭಾಗಿತ್ವದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಾಗಸ್ವರ ಹಾಗೂ ಸಾಕ್ಸಫೋನ್ ವಾದಕ ಪಾಂಡು ದೇವಾಡಿಗರನ್ನು ಸನ್ಮಾನಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಅವರ ಸಂಗೀತ ಗುರುಗಳಾದ ವಿದ್ವಾನ್ ವೇಕಟೇಶ್ವರ ಚಿಪ್ಲುಂಕಾರ್ ಹಾಗೂ ಸಂಘದ ಪದಾಧಿಕಾರಿಗಳು ಸೇರಿ ಸಾಧಕರನ್ನ ಸನ್ಮಾನಿಸಲಾಯಿತು. ದೇವಾಡಿಗ ಸಮುದಾಯ ಸಂಗೀತಾ ವಾದ್ಯಗಳ ಸೇವೆಯಲ್ಲಿ ಇರುವುದಲ್ಲದೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡುತ್ತಿದ್ದಾರೆ ಹಾಗೂ ಅವರು ನಿಷ್ಠೆಗೆ ಹೆಸರಾದವರು ಎಂದು ಸಂಗೀತಾ ಗುರುಗಳಾದ ಚಿಪ್ಲುಂಕಾರ್ ಅವರು ಅಥಿತಿಗಳ ಮಾತಿನಲ್ಲಿ ಉಲ್ಲೆಖಿಸಿದರು. ಈ ಒಂದು ಕಾರ್ಯಕ್ರಮದ ಅಧ್ಯಕ್ಷಥೆಯನ್ನು ನವೀನ್ ದೇವಾಡಿಗ ಅವರು ವಹಿಸಿದ್ದು, ವೇದಿಕೆಯಲ್ಲಿ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತಿರಿದ್ದು ಶರಣ್ ದೇವಾಡಿಗ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.



















