ವಿವಾಹದ ಬಳಿಕ ನಟಿ ರಶ್ಮಿಕಾ ಮಂದಣ್ಣ ಪೋಸ್ಟ್

ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದಾರೆ.
ಮದುವೆಯ ನಂತರ ರಶ್ಮಿಕಾ – ವಿಜಯ್ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದು ನಟಿ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಿಮ್ಮನ್ನು ಸ್ವತಂತ್ರಗೊಳಿಸುವ ಪ್ರೀತಿ ಹುಡುಕಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.


ದಾಮಿನಿ ಎಂಬುವವರು, ನಟಿ ರಶ್ಮಿಕಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದು, ಈ ಟ್ವೀಟ್ ನ ರಶ್ಮಿಕ ರಿಟ್ವೀಟ್ ಮಾಡಿದ್ದಾರೆ. ಇಷ್ಟು ದಿನ ನನ್ನ ಬಗ್ಗೆ ಬರೆದಿದ್ದನ್ನು ಓದಿ ನಾನು ಇಷ್ಟೊಂದು ಭಾವನಾತ್ಮಕವಾಗಿ ವರ್ತಿಸಿಲ್ಲ ನಾನು ಹೇಳಲು ಬಯಸುವುದು ಬಹಳಷ್ಟು ಇದೆ ಆದರೆ ನಾನು ಹೇಳುವುದು ತುಂಬಾ ಕಡಿಮೆ ನಾನು ನನ್ನದೇ ಆದ ಜಾಗವನ್ನು ಹುಡುಕುತ್ತಿದ್ದೆ ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅದನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು, ಪ್ರೀತಿಯ ಬಗ್ಗೆ ನಾನು ಹೇಳುವುದು ಇಷ್ಟೇ, ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.







