ಮುಡಾರು ಗ್ರಾಮದ “ಲಲಿತಾ ಪೂವಪ್ಪ ಪರವ”ಇವರಿಗೆ ಗೌರವ ಅಭಿನಂದನೆ

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ತಾಲೂಕು ಮುಡಾರು ಗ್ರಾಮದ ಶ್ರೀಮತಿ ಲಲಿತಾ ಪೂವಪ್ಪ ಪರವ ಇವರನ್ನು ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವಿನಯಾ ಡಿ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಅವರ ಮನೆಗೆ ತೆರಳಿ ಅಭಿನಂದಿಸಿ ಗೌರವಿಸಲಾಯಿತು.
ಶ್ರೀಮತಿ ಲಲಿತಾ ಇವರು ಇವರ ಪತಿ ದಿ.ಪೂವಪ್ಪ ಪರವ ಹಾಗೂ ಮಕ್ಕಳಾದ ಶ್ರೀ ಗಂಗಯ್ಯ ಮತ್ತು ಶ್ರೀ ರಾಜು ಇವರೊಂದಿಗೆ ಸುಮಾರು 45 ವರುಷಗಳಿಂದ ದೈವಾರಾಧನೆ ಕ್ಷೇತ್ರದಲ್ಲಿ ಕೊಡಮಣಿತ್ತಾಯ, ಪಂಜುರ್ಲಿ ರಕ್ತೇಶ್ವರಿ ಇತ್ಯಾದಿ ದೈವಗಳ ಪಾರ್ದನವನ್ನು ಶ್ರದ್ಧೆ, ಭಕ್ತಿಯಿಂದ ಹೇಳುತ್ತಾ ನಮ್ಮ ಕಲೆ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿರುತ್ತಾರೆ.ಇದನ್ನು ಪರಿಗಣಿಸಿ, ಹಾಗೂ ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಉಪಾಧ್ಯಕ್ಷರುಗಳಾದ ಅಮೃತ ಪ್ರಭು, ಭಾರತಿ ಅಮೀನ್, ಕಾರ್ಯದರ್ಶಿಗಳಾದ ಶೋಭಾ ಶ್ರೀಧರ್, ಪುರಸಭೆಯ ಮಾಜಿ ಅಧ್ಯಕ್ಷರಾದ ಸುಮಾ ಕೇಶವ್, ಕಡಾರಿ ಸರ್ವೋದಯ ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ಹೆಗ್ಡೆ, ಪ್ರಮುಖರುಗಳಾದ ಸುರೇಶ್ ಶೆಟ್ಟಿ, ಅರುಣ್ ಶೆಟ್ಟಿ, ರಜತ್ ರಾಮ್, ಸುರೇಶ್ ಶೆಟ್ಟಿ, ಸಂಗೀತ ಶೆಟ್ಟಿ,ನಿರೀಕ್ಷಾ ರಾಜೇಶ್, ದಿವ್ಯಾ ಪ್ರಶಾಂತ್ , ಸಂಗೀತ , ಮಮತಾ ದಿಲೀಪ್, ರೇಖಾ, ಮಲ್ಲಿಕಾ, ಸುಮತಿ, ರೋಹಿಣಿ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.






