
ಬಜಗೋಳಿ ಮುಡಾರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ: ಗ್ರಾಮ ಪಂಚಾಯತ್ ನ ವಿ ಎಸ್ ಆಚಾರ್ಯ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಶ್ರೀಮತಿ ಶೃತಿ ಡಿ ಅತಿಕಾರಿ ಇವರು ವಹಿಸಿದರು
ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಲಾಯಿತು.ಗ್ರಾಮಸ್ಥರ ಬೇಡಿಕೆಗಳನ್ನು ,ಸಲಹೆಗಳನ್ನು ಆಲಿಸಲಾಯಿತು.

ಮುಡಾರು ಗ್ರಾಮ ಪಂಚಾಯತ್ ನ ಶೇಕಡಾ 25% ನಿಧಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ, ಮದುವೆ ಸಹಾಯಧನ, ವೈದ್ಯಕೀಯ ವೆಚ್ಚ ನೀಡಲಾಯಿತು.• ಶೈಕ್ಷಣಿಕ ಸೇವೆ ಗೈದು ನಿವೃತ್ತ ರಾದ ವಿಜಯ್ ಕುಮಾರ್ ರವರಿಗೆ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಗೈದ ವಿಸ್ಮಿತಾ ದೇವಾಡಿಗ, ಆರೋಗ್ಯ ಇಲಾಖೆ ಯಲ್ಲಿ ಸೇವೆ ಗೈದ ಶ್ರೀಮತಿ ಮೀನಾಕ್ಷಿ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.•
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಶೃತಿ ಡಿ ಅತಿಕಾರಿಯವರು ಮುಡಾರು ಗ್ರಾಮ ಪಂಚಾಯತ್ ಜನಸ್ನೇಹಿ ಆಡಳಿತವನ್ನು ನೀಡಿದ್ದು ಅತ್ಯಂತ ಪಾರದರ್ಶಕ ವಾಗಿ ಜನಸಾಮಾನ್ಯರ ಪರವಾಗಿ ಕೆಲಸ ಮಾಡಿದೆ ಎಂದರು. ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶೃತಿ ಡಿ ಅತಿಕಾರಿ, ನೋಡಲ್ ಅಧಿಕಾರಿ ಗಂಗಾರಾಮ್ ಕುಂಬಾರ್,ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಲತಿ ನಾಯ್ಕ್, ಸಂತೋಷ್ ಪೂಜಾರಿ, ಸದಸ್ಯರಾದ , ಶಿವ ಪ್ರಸಾದ್, ಪ್ರಶಾಂತ್ ಕುಮಾರ್, ಸರಸ್ವತಿ ಆಚಾರ್ಯ, ವಿನಯ ಡಿ ಬಂಗೇರ, ಹರೀಶ್ ಪೂಜಾರಿ, ರಜತ್ ಆರ್ ಮೋಹನ್, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಸ್ ಸ್ವಾಗತಿಸಿ ನಿರ್ವಹಿಸಿದರು, ಕಾರ್ಯದರ್ಶಿ ಜಯಕರ ಧನ್ಯವಾದವಿತ್ತರು.



















