
ಡಿಸೆಂಬರ್ 27 ರಂದು ದಾವಣಗೆರೆಯಲ್ಲಿ ಎಸ್ ಎಸ್ ಪಾಟೀಲ್ ಹುಬ್ಬಳ್ಳಿ ಇವರ ಸಾರಥ್ಯದಲ್ಲಿ ನಡೆದ ವಿಶ್ವ ದರ್ಶನ, ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ,ರಂಗಭೂಮಿ ಕಲಾವಿದ ವಿ ಆರ್ ಸತೀಶ್ ಆಚಾರ್ಯ ವರಂಗ ಹೆಬ್ರಿ ಇವರಿಗೆ ರಂಗ ಭೂಮಿ, ಕಲಾರತ್ನ ರಾಷ್ಟ್ರೀಯ ( ನ್ಯಾಷನಲ್ ಅವಾರ್ಡ್) ಪ್ರಶಸ್ತಿ ಲಭಿಸಿರುತ್ತದೆ.ತುಳು ನಾಟಕ ನಟನೆ,ರಚನೆ, ನಿರ್ದೇಶನ, ಸಾಹಿತ್ಯ, ಕವಿ ಗೋಷ್ಠಿ, ಯಕ್ಷಗಾನ, ಸಿನಿಮಾ ಕ್ಷೇತ್ರದ ಕಲಾವಿದರಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಹರ ಗುರು, ಶರಣರು ಆಶೀರ್ವದಿಸಿದರು
ಹಾಗೂ ಹಲವಾರು ಗಣ್ಯರು ಭಾಗವಹಿಸಿ ಎಸ್ ಎಸ್ ಪಾಟೀಲ್ ಸಂಪಾದಕರು, ವಿಶ್ವ ದರ್ಶನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ದೊಂದಿಗೆ, ಇವರು ಹಲವಾರು ಸಾಧಕರಿಗೆ, ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು







