28.5 C
Udupi
Wednesday, February 4, 2026
spot_img
spot_img
HomeBlogಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆ,

ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆ,

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ, ಚಾಂಪಿಯನ್ ಶಿಪ್ ಹಾಗೂ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ

ಮಂಗಳೂರು ವಿಶ್ವ ವಿದ್ಯಾಲಯ, ಯುವಜನ ಕ್ರೀಡಾ ಇಲಾಖೆ, ಜಿ. ಪ. ಉಡುಪಿ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಕಾಲೇಜು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇವರ ಸಹಯೋಗದಲ್ಲಿ ಇಂದು ಉಡುಪಿ ಅಜ್ಜರಕಾಡು ಸ್ಟೇಡಿಯಂ ನಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ಚಾಂಪಿಯನ್ ಶಿಪ್ 2025 ಹಾಗೂ ಪಥ ಸಂಚಲನದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಕೊಂಡಿರುತ್ತಾರೆ .

ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು ಸನ್ಮಾನ್ಯ ಯಶ್ ಪಾಲ್ ಸುವರ್ಣ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರು ಬಸ್ರುರು ರಾಜೀವ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಪಥ ಸಂಚಲನದ ಬಹುಮಾನ ವಿತರಿಸಿದರು.

ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳು ಬಂಟ್ಸ್ ಸಂಘ ಮುಂಬೈ ಜತೆ ಕಾರ್ಯದರ್ಶಿ, ಗಿರೀಶ್ ಶೆಟ್ಟಿ ತೆಳ್ಳಾರು,ಪ್ರಾoಶುಪಾಲಾರದ ಸೋಜನ್, ಕೌನ್ಸಿಲ್ಲರ್ ವಿಜಯ್ ಕೊಡವೂರು, ಕ್ರೀಡಾ ನಿರ್ದೇಶಕರಾದ ರಾಮಚಂದ್ರ ಪಾಟ್ಕರ್,ದೈಹಿಕ ಶಿಕ್ಷಕರಾದ ರಾಜೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಅಲೀಮಾ ಇವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಗಿರೀಶ್ ಶೆಟ್ಟಿ ತೆಳ್ಳಾರು ಇವರು ವಿಜೇತ ವಿಶೇಷ ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ವಿಜೇತ ವಿಶೇಷ ಶಾಲೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಪಥ ಸಂಚಲನದಲ್ಲಿ ಒಟ್ಟು 48 ವಿದ್ಯಾರ್ಥಿಗಳು ಭಾಗವಹಿಸಿದ್ದು, ಚಿನ್ನದ ಪದಕ-30, ಬೆಳ್ಳಿ ಪದಕ -18 ಕಂಚಿನ ಪದಕ – 15 ಒಟ್ಟು 63 ಪದಕಗಳನ್ನು ಗಳಿಸಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page